ಲಾಕ್ ಡೌನ್ ಮುಗಿದ ಮೇಲೂ ನಿಮಗೆ ಎದುರಾಗಲಿವೆ ಈ ಸವಾಲುಗಳು
ವಸ್ತುಗಳ ಸಾಗಣೆ, ಅಂಗಡಿಗಳಿಗೆ ತಲುಪಲು ಮತ್ತೆ ಒಂದು ವಾರ ಬೇಕಾಗಬಹುದು. ಎಲ್ಲವೂ ಸಹಜ ಸ್ಥಿತಿಗೆ ಬರಲು ಮತ್ತಷ್ಟು ದಿನ ಬೇಕಾಗುತ್ತದೆ. ಇಷ್ಟು ದಿನ ಬಾಕಿ ಮಾಡಿದ್ದ ವ್ಯವಹಾರಗಳನ್ನೆಲ್ಲಾ ಪೂರ್ತಿ ಮಾಡಲು ಮಾರುಕಟ್ಟೆಗಳಲ್ಲಿ, ಇತರ ಕ್ಷೇತ್ರಗಳಲ್ಲಿ ಜನರು ಮುಗಿಬೀಳುವುದು ಸಾಮಾನ್ಯ. ಇದರಿಂದಾಗಿ ಯಾವುದೇ ಕೆಲಸ ಮಾಡಬೇಕಾದರೂ ಮಾರುದ್ದದ ಸಾಲು ನಿಲ್ಲುವುದು ಸಾಮಾನ್ಯವಾಗಲಿದೆ. ಹೀಗಾಗಿ ಇನ್ನೂ ಒಂದಷ್ಟು ದಿನ ನಿಮ್ಮ ತಾಳ್ಮೆ ಪರೀಕ್ಷೆ ನಡೆಯಲಿದೆ.