ಮನುಷ್ಯರಿಗೆ ಆಂಬ್ಯುಲೆನ್ಸ್ ಸಿಗದ ರಾಜ್ಯದಲ್ಲಿ ಹಸುಗಳಿಗೆ ಬಂತು ಆಂಬ್ಯುಲೆನ್ಸ್
ಬುಧವಾರ, 3 ಮೇ 2017 (21:23 IST)
15 ವರ್ಷದ ಮಗ ಆಸ್ಪತ್ರೆಯಲ್ಲಿ ಮೃತಪಟ್ಟಾಗ ಆಸ್ಯತ್ರೆಯಿಂದ ಶವ ತೆಗೆದುಕೊಂಡೊಯ್ಯಲು ಯಾವುದೇ ಸಾರಿಗೆ ವ್ಯವಸ್ಥೆ ಸಿಗದೇ ಹೆಗಲ ಮೇಲೆ ಹೊತ್ತು ಬಳಿಕ ತನ್ನ ಹಳ್ಳಿಗೆ 7 ಕಿ.ಮೀ ಬೈಕ್`ನಲ್ಲಿ ಕೊಂಡೋಯ್ದ ಪ್ರಕರಣ ಉತ್ತರಪ್ರದೇಶದ ಎಟವ್ಹಾದಲ್ಲಿ ನಿನ್ನೆ ನಡೆದಿತ್ತು.
ವಿಪರ್ಯಾಸ ನೋಡಿ, ಮನುಷ್ಯರಿಗೆ ಆಂಬ್ಯುಲೆನ್ಸ್ ಸಿಗದಿದ್ದರೂ ಹಸುಗಳಿಗೂ ನಿನ್ನೆಯೇ ಆಂಬ್ಯುಲೆನ್ಸ್ ಸೇವೆ ಲಖನೌದಲ್ಲಿ ಆರಂಭಿಸಲಾಗಿದೆ. ಸರ್ಕಾರೇತರ ಸಂಸ್ಥೆಯ ಈ ಯೋಜನೆಯಡಿ ಎಲ್ಲ ವೈದ್ಯಕೀಯ ಸವಲತ್ತನ್ನೊಳಗೊಂಡ 7 ಆಂಬ್ಯುಲೆನ್ಸ್`ಗಳಿಗೆ ಚಾಲನೆ ನೀಡಲಾಗಿದೆ.
ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಈ ಹಸುಗಳ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದ್ದಾರೆ. ಇದರಲ್ಲಿ ಯಾವುದೇ ಲಾಭದಲ್ಲಿ ಆಸೆ ಇಲ್ಲ, ಹಸುಗಳ ರಕ್ಷಣೆಗೆ ಪ್ರಾಮಾಣಿಕ ಯತ್ನ ಎಂದು ಗೋರಕ್ಷಕದಳ ತೀಲಿಸಿರುವುದಾಗಿ ವರದಿಯಾಗಿದೆ.