ಧರ್ಮಸ್ಥಳದ ಪವಿತ್ರ ನೇತ್ರಾವತಿಯಲ್ಲೇ ಗೋಮಾಂಸ: ಮಂಜುನಾಥ ನೀನೇ ಕಾಪಾಡಬೇಕು

Krishnaveni K

ಗುರುವಾರ, 2 ಜನವರಿ 2025 (11:42 IST)
ಸಾಂದರ್ಭಿಕ ಚಿತ್ರ
ಧರ್ಮಸ್ಥಳ: ಹಿಂದೂಗಳ ಧಾರ್ಮಿಕ ಕೇಂದ್ರವಾದ ಧರ್ಮಸ್ಥಳದ ನೇತ್ರಾವತಿ ನದಿಯಲ್ಲೇ ಗೋಮಾತೆಯ ಮಾಂಸ ಪತ್ತೆಯಾಗಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ. ಮಂಜುನಾಥ ಸ್ವಾಮಿ ನೀನೇ ಕಾಪಾಡಬೇಕು ಎಂದು ಭಕ್ತರು ಮೊರೆಯಿಡುವಂತಾಗಿದೆ.

ಚಾರ್ಮಾಡಿ ಗ್ರಾಮದ ನೇತ್ರಾವತಿ ನದಿಯ ದಂಡೆಯಲ್ಲಿ ಗೋಣಿ ಚೀಲಗಳಲ್ಲಿ ಗೋಮಾಂಸದ ತ್ಯಾಜ್ಯ ಪತ್ತೆಯಾಗಿದೆ. ಗೋ ಹಂತಕರು ಪವಿತ್ರ ನದಿಯಲ್ಲಿ ಗೋಮಾಂಸ ಎಸೆದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಜೊತೆಗೆ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಗಡುವೂ ನೀಡಿದೆ. ನೇತ್ರಾವತಿಯನ್ನು ಸೇರುವ ಮೃತ್ಯುಂಜಯ ಹೊಳೆಯಲ್ಲಿ ಮೂಟೆಗಟ್ಟಲೆ ದನದ ಎಲುಬು, ರುಂಡ, ಚರ್ಮ ಪತ್ತೆಯಾಗಿದೆ. ಗಮನಿಸಬೇಕಾದ ಅಂಶವೆಂದರೆ ಮಂಜುನಾಥ ಸ್ವಾಮಿಗೆ ಪ್ರತಿನಿತ್ಯ ಅಭಿಷೇಕಕ್ಕಾಗಿ ಇದೇ ನೀರನ್ನು ಬಳಸಲಾಗುತ್ತದೆ.

ಹೀಗಾಗಿ ಉದ್ದೇಶಪೂರ್ವಕವಾಗಿಯೇ ಹಿಂದೂಗಳ ನಂಬಿಕೆಗೆ ಧಕ್ಕೆ ತರುವ ಉದ್ದೇಶದಿಂದಲೇ ಗೋ ಹತ್ಯೆ ಮಾಡಿ ತ್ಯಾಜ್ಯವನ್ನು ಇಲ್ಲಿ ಹಾಕಿರಬಹುದು ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ತಪ್ಪಿತಸ್ಥರನ್ನು ಒಂದು ವಾರದೊಳಗಾಗಿ ಬಂಧಿಸದೇ ಇದ್ದರೆ ಉಗ್ರ ಹೋರಾಟ ಮಾಡುವುದಾಗಿ ಬಜರಂಗ ದಳ ಎಚ್ಚರಿಕೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ