ಊರಿನಲ್ಲಿ ಕ್ರೈಮ್ ಜಾಸ್ತಿ ಇಲ್ಲ ಅದಕ್ಕೆ ಠಾಣೆ ಕೊಡುವುದಿಲ್ಲ- ಗೃಹಸಚಿವರ ಉಡಾಫೆ ಮಾತು

ಬುಧವಾರ, 21 ಸೆಪ್ಟಂಬರ್ 2022 (17:02 IST)
ಊರಿಗೆ ಪೊಲೀಸ್‌ ಠಾಣೆ ಬೇಕು ಎಂದರೆ, ಆ ಊರಿನಲ್ಲಿ ವರ್ಷಕ್ಕೆ ಕನಿಷ್ಠ 300 ಕ್ರೈಂಗಳು ನಡೆದಿರಬೇಕು. ಅಲ್ಲಿನ ಜನಸಂಖ್ಯೆ 50ರಿಂದ 60 ಸಾವಿರ ಇರಬೇಕು.ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಗೌರಿಬಿದನೂರು ಶಾಸಕ ಎನ್‌.ಎಚ್‌. ಶಿವಶಂಕರ ರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಬಗೆ.
 
ನಿಮ್ಮ ಊರಿನಲ್ಲಿ ಅಷ್ಟೊಂದು ಕ್ರೈಂ ನಡೆದಿಲ್ಲ. ನಿಮಗಿದು ಸಮಾಧಾನದ ಸಂಗತಿ. ಕ್ರೈಂ ಜಾಸ್ತಿ ನಡೆದಿಲ್ಲ ಅಂದರೆ ನಿಮ್ಮ ಊರಲ್ಲಿ ಸಜ್ಜನರು ಇದ್ದಾರೆ ಅಂತ ಅರ್ಥ. ಆಸ್ಪತ್ರೆ ಕೇಳಬಹುದು. ಪೊಲೀಸ್‌ ಠಾಣೆ ಕೇಳುವುದು ಒಳ್ಳೆಯ ಲಕ್ಷಣ ಅಲ್ಲ ಎಂದವರು ಹೇಳಿದರು. ಇದಕ್ಕೆ ಆಸ್ಪತ್ರೆ ಕೇಳಿದರೆ ಒಳ್ಳೆಯ ಲಕ್ಷಣ ಹೇಗಾಗುತ್ತದೆ ಎಂದು ಸ್ಪೀಕರ್‌ ಕಾಗೇರಿ ಪ್ರಶ್ನಿಸಿದರು. ಪೊಲೀಸ್‌ ಠಾಣೆ ಬೇಕಾದರೆ ಊರಿನ ಜನ ದುರ್ಜನರು ಆಗಬೇಕೇ ಎಂದು ಸಿ.ಟಿ. ರವಿ ಛೇಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ