ಭೂ ಸ್ವಾಧೀನ ಸಮಸ್ಯೆ: ಕೇಂದ್ರ ಸಚಿವ ಗೋಯಲ್‌ಗೆ ತಿರುಗೇಟು ನೀಡಿದ ಡಿಕೆಶಿ

ಬುಧವಾರ, 13 ಜುಲೈ 2016 (15:47 IST)
ಕೇಂದ್ರ ಸರಕಾರದ ನಿಲುವಿನಿಂದ ಭೂ ಸ್ವಾಧೀನ ಸಮಸ್ಯೆ ಉಂಟಾಗುತ್ತಿದೆ ಎಂದು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯಲ್ ಅವರಿಗೆ ತಿರುಗೇಟು ನೀಡಿದ್ದಾರೆ.
 
ವಿಧಾನಸೌಧದಲ್ಲಿ ಮಾತನಾಡಿದ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್, ಕೇಂದ್ರ ಸರಕಾರದ ನಿಲುವಿನಿಂದ ಭೂಸ್ವಾಧಿನ ಸಮಸ್ಯೆ ಉಂಟಾಗುತ್ತಿದೆ, ಭೂ ಸ್ವಾಧೀನಕ್ಕಾಗಿ ಕೇಂದ್ರ ಸರಕಾರ 15 ಪ್ರತಿಶತ ಪರಿಹಾರ ನೀಡಲಿದೆ. ಆದರೆ, ರಾಜ್ಯ ಸರಕಾರ 50 ಪ್ರತಿಶತ ಪರಿಹಾರ ನೀಡಲು ಸಿದ್ಧವಿದೆ ಎಂದು ಹೇಳಿದರು.
 
ವಿದ್ಯುತ ಸರಬರಾಜುಗಾಗಿ ಗ್ರೇಡ್ ಲೈನ್ ಸ್ಥಾಪಿಸಲು ಭೂ ಸ್ವಾಧೀನ ಸಮಸ್ಯೆ ಅಡ್ಡಿಯಾಗುತ್ತಿದೆ. ಈ ಕಾರಣಕ್ಕಾಗಿ 16000 ಮೆಗಾವ್ಯಾಟ್ ವಿದ್ಯುತ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ಸಮಸ್ಯೆಯನ್ನು ಕೇಂದ್ರ ಸರಕಾರವೇ ಪರಿಹರಿಸಬೇಕು ಎಂದು ಸಚಿವ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ