ಕಾಂಗ್ರೆಸ್ ಅವರು ಪಾದಯಾತ್ರೆ ನೆಪದಲ್ಲಿ ಮೇಕೆ ಮಾಂಸ ತಿನ್ನಲು ಹೊರಟಿದ್ದಾರೆ ಎಂಬ ಸಚಿವ ಅಶೋಕ್ ಹೇಳಿಕೆಗೆ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಅಶೋಕಣ್ಣನಿಗೆ ಮೇಕೆ, ಕುರಿ, ನಾಟಿಕೋಳಿ ರುಚಿ ಚೆನ್ನಾಗಿ ಗೊತ್ತಿದೆ.
ಅಂತಹ ಬೆಂಗಳೂರಿಗರಿಗೆ ಶುದ್ಧ ಕುಡಿಯುವ ನೀರು ಕೊಡಬೇಕು. ಶುದ್ಧ ಕಾವೇರಿ ನೀರು ಕೊಡಬೇಕೆಂದು ನಾವು ಪ್ರಯತ್ನಿಸುತ್ತಿದ್ದೇವೆ. ಈ ವಿಚಾರ ಯಾವುದೂ ಸಚಿವ ಅಶೋಕಣ್ಣನಿಗೆ ಗೊತ್ತಿಲ್ಲ ಅಂತ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ. ಇನ್ನೂ ಪಾದಯಾತ್ರೆಗೆ ಗೃಹ ಸಚಿವರ ಅನುಮತಿ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ನಮಗೆ ಗೃಹ ಸಚಿವರ ಅನುಮತಿ ಬೇಡ, ರಕ್ಷಣೆಯೂ ಬೇಡ. ದೇವೇಗೌಡರು ಪಾದಯಾತ್ರೆ ಮಾಡಿದಾಗ ಅನುಮತಿ ನೀಡಿದ್ರಾ? ಸ್ಟ್ಯಾಂಪ್ ಹಾಕಿ ಅನುಮತಿ ನೀಡಿದ್ದರಾ? ಹೋರಾಟಗಾರರು ಕೋಳಿಯನ್ನು ಕೇಳಿ ಮಸಾಲೆ ಅರಿತಾರಾ? ಎಂದು ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.