ಪುಟ್ ಪಾತ್ ಗಳ ಮೇಲೆ ಕೈಗೆಟಕುವಂತಿದೆ ಡೇಂಜರಸ್ ಟ್ರಾಸ್ಸ್ ಫಾರ್ಮಾರುಗಳು…!

ಗುರುವಾರ, 30 ಮಾರ್ಚ್ 2023 (17:50 IST)
ಬೆಂಗಳೂರಿಗರೆ ದಿನಾ ನಿತ್ಯ ಓಡಾಡೋ ರಸ್ತೆ,ಫುಟ್ ಪಾತ್ ಗಳಲ್ಲಿ ಎಚ್ಚರದಿಂದಿರಿ, ಶಾಕ್ ನೀಡಿ ರಕ್ತ ಹೀರಿ ಸಾವಿನ ದವಡೆಗೆ ನೊಕೋಕೆ ಬೀದಿ ಬೀದಿಗಳಲ್ಲಿ ಯಮರೂಪಿ ಟ್ರಾಸ್ಸ್ ಫಾರ್ಮಾರುಗಳು ಕಾದು ಕುಳಿತಂತಿವೆ .ಬೆಂಗಳೂರು ಸುಂದರ ನಗರಿ, ಅದೇಷ್ಟೋ ಜನರಿಗೆ ಜೀವನ ನೀಡಿರೋ ಊರು, ಆದ್ರೆ ಬೆಸ್ಕಾಂ ಮಾಡ್ತಿರೋ ಎಡವಟ್ಟುಗಳಿಂದ ಸುಂದರವಾದ  ಜೀವನ ಕಟ್ಟಿಕೊಂಡು ಕನಸುಗಳನ್ನು ನನಸು ಮಾಡಿಕೊಳ್ಳಬೇಕು ಅಂತಿರೋರು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ, ಹೌದು ಬೀದಿ ಬದಿಗಳಲ್ಲಿ ಸಾರ್ವಜಿನಿಕರ ಕೈಗೆಟಕುವಂತೆ ಬೆಸ್ಕಾಂ ಟ್ರಾಸ್ಸ್ ಫಾರ್ಮಾರುಗಳನ್ನು ನಿರ್ಮಿಸುತ್ತಾ ಬಂದಿದೆ.ದಿನ ನಿತ್ಯ ಸಾವಿರಾರು ಮಂದಿ ಓಡಾಡೋ ಫುಟ್ ಪಾತ್ ಗಳ ಮೇಲೆ ಹೈ ವೋಲ್ಟೇಜ್ ಟ್ರಾಸ್ಸ್ ಫಾರ್ಮಾರುಗಳನ್ನು ನಿರ್ಮಿಸಿ, ಅವುಗಳ ನಿರ್ವಹಣೆಯನ್ನು ಸರಿಯಾಗಿ ಮಾಡದೆಯಿರುವುದರಿಂದ ಸಾರ್ವಜನಿಕರು ಆಂತಕದಲ್ಲೆ ಓಡಾಡೋ ಪರಿಸ್ಥಿತಿ ಉಂಟಾಗಿದೆ.

ಬೆಂಗಳೂರಿನ ಹೆಚ್ಚಿನ ಏರಿಯಾಗಳಲ್ಲಿ ಡೇಂಜರಸ್ ಟ್ರಾಸ್ಸ್ ಫಾರ್ಮಾರುಗಳ ಸ್ಥಿತಿ ಹೀನಾಯವಾಗಿದೆ,ಒಂದೆಡೆ ಹೈ ವೋಲ್ಟೇಜ್ ಕೇಬಲ್ ಗಳು ಪುಟ್ ಪಾತ್ ಗಳ ಮೇಲೆ ಬಿದ್ದು ನೇತಾಡುತ್ತಿದ್ರೆ,ಇನ್ನೋಂದೆಡೆ  ಟ್ರಾಸ್ಸ್ ಫಾರ್ಮಾರುಗಳ ಸುತ್ತಾ ಹಾಕಿರೋ ಕಂಬಿಗಳು ತಕ್ಕು ಹಿಡಿದು ಕಸದ ತೊಟ್ಟಿಗಳಾಗಿ ಪರಿವರ್ತನೆಗೊಂಡಿದೆ.ಇದರಿಂದಾಗಿ ಹೆಚ್ಚಿನ ಅಪಾಯ ಉಂಟಾಗುವ ಸಾದ್ಯತೆಗಳಿರುವುದರಿಂದ  ಟ್ರಾಸ್ಸ್ ಫಾರ್ಮಾರುಗಳನ್ನು ಸ್ಥಳಾಂತರಗೊಳಿಸಿ, ಅಥಾವ ಸರಿಯಾಗಿ ನಿರ್ವಹಣೆ ಮಾಡಿ ಅಂತಾ ಬೆಸ್ಕಾಂಗೆ ನೂರಾರು ಮಂದಿ ಮನವಿ ಸಲ್ಲಿಸಿದ್ರು, ಬೆಸ್ಕಾಂ ಮಾತ್ರ ತಲೆ ಕೆಡಿಸಿಕೊಳ್ಳದೆ  ಬೇಜವಾಬ್ದಾರಿಯಿಂದ ಕೆಲಸ ನಿರ್ಮಾಹಿಸುತ್ತಿದೆ ಎಂದೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ