ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ!

ಶನಿವಾರ, 4 ಫೆಬ್ರವರಿ 2023 (10:46 IST)
ಕಲಬುರಗಿ : ತಂದೆಯೇ ಮಗಳ ಮೇಲೆ ಅತ್ಯಾಚಾರವೆಸಗಿದ ಅಮಾನುಷ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆಯಲ್ಲಿ ತಂದೆಯೊಬ್ಬ 13 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಷ್ಟೇ ಅಲ್ಲದೇ ಆ ಅಪ್ರಾಪ್ತ ಬಾಲಕಿಯನ್ನು 2 ತಿಂಗಳ ಗರ್ಭಿಣಿಯಾಗಿಸಿದ್ದಾನೆ. ಬಾಲಕಿಯು 2 ದಿನದ ಹಿಂದೆ ವಾಂತಿಯಿಂದ ಬಳಲುತ್ತಿದ್ದಳು. ಹೀಗಾಗಿ ಆಕೆ ಆಸ್ಪತ್ರೆಗೆ ಹೋಗಿದ್ದಾಳೆ.

ಆಸ್ಪತ್ರೆಯಲ್ಲಿ ತಪಾಸಣೆ ಮಾಡುವಾಗ ಅಪ್ರಾಪ್ತ ಬಾಲಕಿಯು ಗರ್ಭಿಣಿಯಾಗಿರುವ ಸತ್ಯ ಬಯಲಾಗಿದೆ. ಈ ವೇಳೆ ಬಾಲಕಿಯು ತನ್ನ ತಂದೆಯಿಂದಲೇ ಅತ್ಯಾಚಾರಕ್ಕೆ ಒಳಗಾಗಿರುವ ವಿಷಯವನ್ನು ತಿಳಿಸಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ