‘ಸಿಎಂ ಯಡಿಯೂರಪ್ಪ ಕಿರುಕುಳದಿಂದ ಡಿಸಿ ಸೆಂಥಿಲ್ ರಾಜೀನಾಮೆ’

ಶುಕ್ರವಾರ, 6 ಸೆಪ್ಟಂಬರ್ 2019 (16:50 IST)

ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೀಡಿರೋ ಕಿರುಕುಳದಿಂದಾಗಿಯೇ ಡಿಸಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ನೀಡಿದ್ದಾರೆ.

ಜಿಲ್ಲಾಧಿಕಾರಿಯಾಗಿ ಸಸಿಕಾಂತ್ ಸೆಂಥಿಲ್ ಉತ್ತಮ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರರು ನೀಡುತ್ತಿದ್ದ ಕಿರುಕುಳದಿಂದಾಗಿಯೇ ರಾಜೀನಾಮೆ ನೀಡಿದ್ದಾರೆ. ಹೀಗಂತ MLC ಹರೀಶ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳೂರು ಡಿಸಿ ರಾಜೀನಾಮೆ ನೀಡಿದ ಬೆನ್ನಲ್ಲೇ ಡಿಸಿ ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.

ಬಿಜೆಪಿ ಸರಕಾರ ನಿಡಿರೋ ಕಿರುಕುಳ ಹಾಗೂ ಒತ್ತಡದಿಂದ ಸೆಂಥಿಲ್ ರಾಜೀನಾಮೆ ಸಲ್ಲಿಸಿದ್ದಾರೆ. ಡ್ರಗ್ ಮಾಫಿಯಾ ತಡೆದಿದ್ದು, ಮರಳು ಮಾಫಿಯಾ ನಿಯಂತ್ರಿಸಿದ್ದು ಕಾರಣವಾಗಿದೆ ಎಂದಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ