ರಮೇಶ್ ಜಾರಕಿಹೊಳಿ ಕೈ ಬಿಟ್ಟಿದ್ದು ಹೈಕಮಾಂಡ್ ನಿರ್ಧಾರ ಎಂದ ಡಿಸಿಎಂ
ಭಾನುವಾರ, 23 ಡಿಸೆಂಬರ್ 2018 (16:15 IST)
ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರದ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ ಅವರನ್ನು ಕೈ ಬಿಟ್ಟ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಅದು ಹೈಕಮಾಂಡ್ ನಿರ್ಧಾರವಾಗಿದೆ ಎಂದು ಹೈಕಮಾಂಡ್ ನತ್ತ ಬೊಟ್ಟು ತೋರಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿರುವ ಡಿಸಿಎಂ ಡಾ.ಜಿ.ಪರಮೇಶ್ವರ, ರಮೇಶ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈ ಬಿಟ್ಟಿರುವುದು ಪಬ್ಲಿಕ್ ನಲ್ಲಿ ಹೆಳಲಿಕ್ಕೆ ಆಗುತ್ತಾ? ಎಂದು ಪ್ರಶ್ನಿಸಿದ್ದು, ಹೈಕಮಾಂಡ ನವರು ನಿರ್ಧಾರ ತೆಗೆದುಕೊಂಡಂತೆ ಕೈ ಬಿಡಲಾಗಿದೆ ಎಂದಿದ್ದಾರೆ.
ಇನ್ನು ಬೆಳಗಾವಿ ಜಿಲ್ಲೆಯ ಮರಳು ಮಾಫಿಯಾ ಪ್ರಕರಣ ಕುರಿತು ಡಿಸಿಎಂ ಪ್ರತಿಕ್ರಿಯೆ ನೀಡಿದ್ದು, ವಿಲೆಜ್ ಅಕೌಂಟೆಟ್ ಸಾವು ಸಂಭವಿಸಿದ್ದರ ಪ್ರಕರಣ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸ್ಪೆಷಲ್ ಟೀಂ ನೇಮಕ ಮಾಡಿ ಸರಿಯಾದ ತನಿಖೆ ನಡೆಸಲು ಸೂಚನೆ ಕೊಟ್ಟಿದ್ದೇನೆ ಎಂದರು.
ಮರಳು ಮಾಫಿಯಾವನ್ನು ಹತ್ತಿಕ್ಕಲು ಹೋದಾಗ ಅಧಿಕಾರಿಗಳ ಮೆಲೆ ಈ ರೀತಿ ಆಗಬಾರದಿತ್ತು ಎಂದರು.