ಟಿ. ರಂಜಿತಾ ದಾಖಲಿಸಿದ್ದ ಪ್ರಕರಣ ಸಂಬಂಧ ರಾಮನಗರ ಸಿವಿಲ್ ಕೋರ್ಟ್‌ಗೆ ವಿಚಾರಣೆಗೆಂದು ಆಗಮಿಸಿದ್ದ ಆರತಿರಾವ್ ಹಾಗೂ ಲೆನಿನ್ ಕುರುಪ್ಪನ್ ಮೇಲೆ ಬಿಡದಿ ನಿತ್ಯಾನಂದ ಸ್ವಾಮಿಯ ನಿತ್ಯಾನಂದನ ಅನುಯಾಯಿಗಳು ಅನೂಚಿತ ವರ್ತನೆ ತೋರಿದಲ್ಲದೇ ಪ್ರಾಣ ಬೆದರಿಕೆ ಹಾಕಿದ ಘಟನೆ ನಡೆದಿದೆ.
ರಾಮನಗರದ ಬಿಡದಿ ಬಳಿಯ ಧ್ಯಾನಪೀಠದ ನಿತ್ಯಾನಂದ ಹಾಗೂ ನಟಿ ರಂಜಿತಾ ನಡೆಸಿದ್ದ ರಾಸಲೀಲೆಯ ಸಿಡಿ ಬಿಡುಗಡೆಗೂ ಮುನ್ನ ಹಣಕ್ಕೆ ಬೇಡಿಕೆ ಇಟ್ಟಿದ್ದರೆಂದು ನಟಿ ರಂಜಿತಾ ಪ್ರಕರಣ ದಾಖಲಿಸಿದ್ದರು. ಇನ್ನು ಈ ಪ್ರಕರಣದ ವಿಚಾರಣೆಗೆಂದು ರಾಮನಗರದ ಸಿವಿಲ್ ನ್ಯಾಯಾಲಯಕ್ಕೆ ಆಗಮಿಸಿದ್ದ ಆರತಿರಾವ್ ಹಾಗೂ ಲೆನಿನ್ ಕುರುಪ್ಪನ್ ಅವರ ಚಿತ್ರೀಕರಣಕ್ಕೆ ನಿತ್ಯಾನಂದನ ಮೂವರು ಶಿಷ್ಯರು ಮುಂದಾದರು.
ಈ ಬಗ್ಗೆ ಆರತಿರಾವ್ ಹಾಗೂ ಲೆನಿನ್ ನಿತ್ಯ ಶಿಷ್ಯರನ್ನ ಪ್ರಶ್ನೆ ಮಾಡಿದಕ್ಕೆ ಅನುಚಿತ ವರ್ತನೆ ತೋರಿದ ನಿತ್ಯಾನಂದ ಶಿಷ್ಯರು ಇಬ್ಬರಿಗೂ ಪ್ರಾಣ ಬೆದರಿಕೆ ಒಡ್ಡಿದ್ದಾರೆ ಅನ್ನೋ ಅರೋಪ ಇದೆ. ಇನ್ನು ಕೋರ್ಟ್ ಆವರಣದಲ್ಲಿಯೇ ನಡೆಯುತ್ತಿದ್ದ ಘಟನೆ ನೋಡಿದ ಕೋರ್ಟ್‌ನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಐಜೂರು ಪೊಲೀಸರು ಓರ್ವ ನಿತ್ಯಾನಂದನ ಶಿಷ್ಯನನ್ನ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಆರತಿರಾವ್ ಹಾಗೂ ಲೆನಿನ್ ಕುರುಪ್ಪನ್ , ಪ್ರಾಣ ಬೆದರಿಕೆ ಹಾಕಿರುವ ನಿತ್ಯಾನಂದನ ಮೂವರು ಶಿಷ್ಯಂದಿರ ವಿರುದ್ಧ ದೂರು ದಾಖಲಿಸಿದ್ದಾರೆ.