ಹುಬ್ಬಳ್ಳಿ : ಇವತ್ತು ನಾಗರಿಕತೆ ಬೆಳೆದಿದೆ. ಮಸೀದಿ, ದೇವಸ್ಥಾನ ಕೆಡವೋದು ನೋವಿನ ಸಂಗತಿ. ಆದರೆ ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯ ಬೈರಿದೇವರಕೊಪ್ಪ ದರ್ಗಾ ಭೇಟಿಯ ಬಳಿಕ ಮಾತನಾಡಿದ ಅವರು, ದರ್ಗಾ ಶಿಪ್ಟ್ ಮಾಡೋ ಕಾರ್ಯಚಾರಣೆ ವೀಕ್ಷಿಸಲು ಬಂದಿದ್ದೆ. ದರ್ಗಾದ ಮುಖ್ಯಸ್ಥರು ದರ್ಗಾ ಶಿಫ್ಟ್ ಮಾಡೋದಕ್ಕೆ ಸಹಕರಿಸಿದ್ದಾರೆ.
ನಾನು ಅವರಿಗೆ ಧನ್ಯವಾದ ಹೇಳ್ತೀನಿ. ಜೊತೆಗೆ ಹೊಸ ಮಸೀದಿ ಕಟ್ಟೋಕೆ ತೀರ್ಮಾನ ಮಾಡಿದ್ದಾರೆ. ಜಾಗ ನೋಡಿದ್ರೆ ನಾನು ಅವರಿಗೆ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಇದೇ ರಸ್ತೆಯಲ್ಲಿ 13 ದೇವಸ್ಥಾನ ಕೆಡವಿದ್ದೇವೆ. ನಾವು ಕೆಲವು ಸಲ ಕೋರ್ಟ್ ಆದೇಶ ಪಾಲನೆ ಮಾಡಬೇಕಾಗತ್ತೆ. ರಾಜ್ಯದಲ್ಲಿ ಸುಪ್ರೀಂ ಕೋರ್ಟ್, ಹೈಕೋರ್ಟ್ ಸೂಚನೆ ಪಾಲಿಸಬೇಕಾಗತ್ತೆ ಎಂದು ತಿಳಿಸಿದ್ದಾರೆ.