ರಾಮಾಯಣ ಕುರಿತಾದ ನಾಟಕ ಪ್ರದರ್ಶನ ವೇಳೆ ಜೀವಂತ ಹಂದಿಯನ್ನು ಕೊಂದು ಸೇವಿಸಿದ ರಾಕ್ಷಸ ಪಾತ್ರದಾರಿ

Sampriya

ಮಂಗಳವಾರ, 3 ಡಿಸೆಂಬರ್ 2024 (17:27 IST)
Photo Courtesy X
ಒಡಿಶಾ: ರಾಮಾಯಣ ಕುರಿತಾದ ನಾಟಕ ಪ್ರದರ್ಶನದ ವೇಳೆ ರಾಕ್ಷಸ ಪಾತ್ರದಾರಿಯೊಬ್ಬ ವೇದಿಕೆಯಲ್ಲಿಯೇ ಜೀವಂತ ಹಂದಿಯನ್ನು ಕೊಂದು ಅದರ ಹೊಟ್ಟೆಯನ್ನು ಸೀಳಿ ಹಸಿ ಮಾಂಸವನ್ನು ತಿಂದಿರುವ ಘಟನೆ ಒಡಿಶಾದ ಬಹರಾಂ‍ಪುರ್ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ನವೆಂಬರ್ 24ರಂದು ಬಹರಾಂ‍ಪುರದ ಹಿಂಜಿ ಪೊಲೀಸ್ ಠಾಣೆಯ ರಾಲಾಬ್ ಎಂಬ ಹಳ್ಳಿಯಲ್ಲಿ ನಡೆದಿದೆ. ಈ ಸಂಬಂಧ ರಾಕ್ಷಸ ಪಾತ್ರ ಮಾಡಿದ ಭೀಮಾಂಧರ್ ಗೌಡಾ ಎಂಬುವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಲಾಬ್ ಹಳ್ಳಿಯ ಗ್ರಾಮಸ್ಥರು ಕಂಜೈನಾಲ್ ಯಾತ್ರಾ ಪ್ರಯುಕ್ತ ಗ್ರಾಮದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ನಾಟಕ ಆಯೋಜಿಸಿದ್ದರು. ಈ ವೇಳೆ ರಾಕ್ಷಸ ಪಾತ್ರಧಾರಿ ಭೀಮಾಂಧರ್ ಗೌಡಾ ಹಾಗೂ ಆತನ ಕೆಲ ಸಹಚರರು ಸಭಿಕರ ಮನ ಸೆಳೆಯುವ ಉದ್ದೇಶದಿಂದ ಕತ್ತಿಯಿಂದ ಹಂದಿಯನ್ನು ಕೊಂದು ಕ್ರೌರ್ಯ ಮೆರೆದಿದ್ದಾರೆ. ಅಲ್ಲದೇ ಈ ಸಂದರ್ಭದಲ್ಲಿ ಜೀವಂತ ಹಾವುಗಳನ್ನು ಪ್ರದರ್ಶಿಸಿ ಅನೇಕರಿಗೆ ಭಯ ಹುಟ್ಟಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ