ದೀಪಾವಳಿಗೆ ದೇಶದಾದ್ಯಂತ 72 ಸಾವಿರ ಕೋಟಿ ವಹಿವಾಟು ನಡೆದಿದೆ ಎಂದು ವರದಿಯಾಗಿದೆ. ಚೀನಾ ವಸ್ತುಗಳನ್ನು ಬಹಿಷ್ಕರಿಸಿದ್ದರಿಂದ ಆ ದೇಶಕ್ಕೆ ಸುಮಾರು 40 ಸಾವಿರ ಕೋಟಿ ರೂ. ನಷ್ಟವಾಗಿದೆ ಎನ್ನಲಾಗಿದೆ. ನಿರೀಕ್ಷೆಗೂ ಮೀರಿ ಜನ ಸ್ವದೇಶೀ ವಸ್ತುಗಳನ್ನು ಖರೀದಿಸಿರುವುದು ಇದಕ್ಕೆ ಕಾರಣ. ಲಾಕ್ ಡೌನ್ ನಿಂದಾಗಿ ಹಳ್ಳ ಹಿಡಿದಿರುವ ಅರ್ಥ ವ್ಯವಸ್ಥೆ ಚೇತರಿಕೆಗೆ ಇದು ಒಳ್ಳೆಯ ಸುದ್ದಿ ಎಂದೂ ಹೇಳಬಹುದು.