ಉತ್ಸವದ ನಡುವೆಯೂ, ಗ್ರಾಮಸ್ಥರಿಂದ ಪ್ರತಿಭಟನೆ
ಒಂದೆಡೆ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದರೇ, ಇನ್ನೊಂದೆಡೆ ಲಕ್ಕುಂಡಿ ಗ್ರಾಮದ 2ನೇ ವಾರ್ಡ್ನ ಜನರು ಉತ್ಸವದ ಖುಷಿಯಲ್ಲಿ ಭಾಗಿಯಾಗದೇ ಪ್ರತಿಭಟನೆ ಮಾಡುತ್ತಿದ್ದಾರೆ. ಗ್ರಾಮದ 2ನೇ ವಾರ್ಡ್ನ ಜನರಿಗೆ ಶೌಚಾಲಯದ ಸಮಸ್ಯೆ ಇರುವದರಿಂದ ಗ್ರಾಮದ ಮಹಿಳೆಯರು ಶೌಚಾಲಯಕ್ಕೆ ಬೇಡಿಕೆಯಿಟ್ಟಿದ್ದಾರೆ. ಉತ್ಸವದ ಸಂಭ್ರಮದ ನಡುವೆಯೂ ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಿದ್ದರೂ ಶೌಚಾಲಯದ ಸಮಸ್ಯೆಯನ್ನ ಅಧಿಕಾರಿಗಳು ಬಗೆಹರಿಸಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತಿರುವ ಮಹಿಳೆಯರು ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಸ್ಯೆ ಬಗೆಹರಿಯದಿದ್ದರೆ ಉತ್ಸವಕ್ಕೆ ಅವಕಾಶ ನೀಡಲ್ಲ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಮತ್ತು ಪಿಡಿಓ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೊತೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದರು.