ಒಂದೇ ದಿನ ಒಂದು ಡಜನ್ ಕೊರೊನಾ ವೈರಸ್ ಕೇಸ್ ಪತ್ತೆ
ಮೊದಲೇ ಆತಂಕದಲ್ಲಿರುವ ಜಿಲ್ಲೆಯಲ್ಲಿ ಒಂದೇ ದಿನ ಮತ್ತೆ ಡಜನ್ ಕೊರೊನಾ ಕೇಸ್ ಗಳು ಪತ್ತೆಯಾಗಿವೆ.
ಮೊದಲ ಹೆಲ್ತ್ ಬುಲೆಟಿನ್ ನಲ್ಲಿ ಯಾವುದೇ ಪ್ರಕರಣ ದೃಢಪಟ್ಡಿರಲಿಲ್ಲ. ಆದರೆ ಸಂಜೆಯ ಹೆಲ್ತ್ ಬುಲೆಟಿನ್ ನಲ್ಲಿ ಹನ್ನೆರಡು ಜನರಲ್ಲಿ ವೈರಸ್ ಇರುವುದು ದೃಢಪಟ್ಟಿದೆ.
ಈ ಪೈಕಿ ಅಹಮದಬಾದಿಗೆ ಹೋಗಿ ಬಂದ ಆರು ಜನರಲ್ಲಿ ಮತ್ತು ರೋಗಿ ಸಂಖ್ಯೆ 696 ರ ಸಂಪರ್ಕದಿಂದ ಇಬ್ಬರಿಗೆ ಸೋಂಕು ಇರುವುದು ಖಚಿತವಾಗಿದೆ.
ಸೋಂಕಿತರಲ್ಲಿ ಇಪ್ಪತ್ತು ವರ್ಷ ದ ಇಬ್ಬರು ಯುವಕರು, ಒಂಭತ್ತು ವರ್ಷದ ಒಂದು ಹೆಣ್ಣು ಮಗು ಸೇರಿದೆ.
ಪ್ರಸ್ತುತ ಜಿಲ್ಲೆಯಲ್ಲಿ 77 ಸಕ್ರಿಯ ಕೋವಿಡ್ 19 ಪ್ರಕರಣಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.