ದೇವೇಗೌಡರಿಗೆ ಬಗ್ಗಿದ್ರಾ ಫಾಲಿ ನಾರಿಮನ್?

ಮಂಗಳವಾರ, 4 ಅಕ್ಟೋಬರ್ 2016 (15:16 IST)
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಪರ ವಾದ ಮಂಡಿಸಲು ನಿರಾಕರಿಸಿದ್ದ ಫಾಲಿ ನಾರಿಮನ್ ಅವರ ಮನವೊಲಿಸುವಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಯಶಸ್ವಿಯಾಗಿದ್ದಾರೆ.
 
ರಾಜ್ಯದ ರೈತರ ಹಿತದೃಷ್ಟಿಯಿಂದ ಕರ್ನಾಟಕದ ಪರ ನಿವೇ ವಾದ ಮಂಡಿಸಬೇಕು. ಇಲ್ಲದಿದ್ದರೇ ರಾಜ್ಯದ ರೈತರನ್ನು ಕರೆತಂದು ನಿಮ್ಮ ಮನೆ ಮುಂದೆ ಧರಣಿ ಕೂಡುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರು ವಕೀಲ ನಾರಿಮನ್ ಅವರ ಮನವೊಲಿಸಿದರು. ಗೌಡರ ಮಾತಿಗೆ ಬೆಲೆ ಕೊಟ್ಟ ನಾರಿಮನ್ ಅವರು ರಾಜ್ಯದ ಪರ ವಾದ ಮಂಡಿಸಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
 
ಸದನದಲ್ಲಿ ಆಡಿರುವ ಮಾತುಗಳಿಂದ ನನ್ನ ಮನಸ್ಸಿಗೆ ಬೇಸರವಾಗಿದೆ.  ರಾಜ್ಯ ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರು ಕ್ಷಮೆ ಕೇಳುವವರೆಗೂ ನಾನು ರಾಜ್ಯದ ಪರ ವಾದ ಮಂಡಿಸುವುದಿಲ್ಲ ಎಂದು ಹಿರಿಯ ವಕೀಲ ನಾರಿಮನ್ ಪಟ್ಟು ಹಿಡಿದಿದ್ದರು.
 
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ರಾಜ್ಯದ ಪರ ವಾದ ಮಂಡಿಸಲು ನಿರಾಕರಿಸಿದ್ದ ಫಾಲಿ ನಾರಿಮನ್ ಅವರ ಮನವೊಲಿಸಲು ರಾಜ್ಯದ ನಾಯಕರು ಕಸರತ್ತು ನಡೆಸಿದ್ದರು. ಕೊನೆಗೆ ದೇವೇಗೌಡರು ಮಾತಿಗೆ ಬೆಲೆ ಕೊಟ್ಟ ರಾಜ್ಯದ ಪರ ವಾದ ಮಂಡಿಸಲು ನಾರಿಮನ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ