ದೇವೇಗೌಡ ಹೇಳಿಕೆ ಬರೀ ನಾಟಕ, ರಾಜಕೀಯ ಗಿಮಿಕ್: ಸಿಎಂ

ಬುಧವಾರ, 2 ಮೇ 2018 (13:31 IST)
ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡ್ರೆ ಕುಮಾರಸ್ವಾಮಿಯವರನ್ನು ಮನೆಯಿಂದ ಹೊರಗಡೆ ಹಾಕುತ್ತೇನೆ ಎನ್ನುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ಟೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ ಹೇಳಿಕೆ ಬರೀ ನಾಟಕ, ರಾಜಕೀಯ ಗಿಮಿಕ್ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕಾಗಿ ಹಾಗೂ ಅಲ್ಪಸಂಖ್ಯಾಯತರ ಮತಗಳನ್ನು ಪಡೆಯೋದಿಕ್ಕಾಗಿ ದೇವೇಗೌಡರು ಈ ರೀತಿ ಮಾಡ್ತಿದ್ದಾರೆ. ಈ ಹಿಂದೆ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ ಮಾಡಿದ್ರೆ ಕುಮಾರಸ್ವಾಮಿಯನ್ನು ಮನೆಯಿಂದ ಹೊರಗಡೆ ಹಾಕ್ತಿನಿ ಅಂತ ಹೇಳಿದ್ರು...ಆದ್ರೆ ಹಾಕಿದ್ರಾ....ಎಂದು ಸಿಎಂ ಪ್ರಶ್ನಿಸಿದ್ರು.
 
 ಕುಮಾರಸ್ವಾಮಿ ಮತ್ತು ಬಿಜೆಪಿ ರಾಷ್ಟ್ಟೀಯ ಅಧ್ಯಕ್ಷ ಅಮಿತ್ ಶಾ ಒಂದೇ ವಿಮಾನದಲ್ಲಿ ಹೋಗಿರೋ ಮಾಹಿತಿ ನನ್ನ ಹತ್ತಿರ ಇದೆ. ಹೀಗಾಗಿ ನಾನು ಹೇಳಿದ್ದೇನೆ. ಆದ್ರೆ ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡ್ರೂ ಕಾಂಗ್ರೆಸ್ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ. ನಮ್ಮ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರ್ತಿವಿ, ಮತ್ತೆ ನಾನೇ ಸಿಎಂ ಆಗೋದು ಸಾಧ್ಯತೆ ಇದೆ ಎಂದು ಹೇಳಿದ್ರು. 
 
ಪ್ರಧಾನಿ ಮೋದಿ ರಾಜ್ಯದಲ್ಲಿ ಪ್ರವಾಸ ಮಾಡಿ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಆಡಿದ್ರೆ ನಮ್ಮ ಮೇಲೆ ಯಾವುದೇ ರೀತಿಯ ಪರಿಣಾಮ ಬಿರೋದಿಲ್ಲ. ಇಲ್ಲಿ ಎಲ್ಲರೂ ಒಂದಿಲ್ಲ, ಒಂದು ದಿನ ನೆಗೆದು ಬೀಳೋರೇ ಇದ್ದಾರೆ. ಅದ್ರಲ್ಲಿ ಯಡಿಯೂಪ್ಪನೂ ಒಬ್ಬ, ಜೈಲಿಗೆ ಹೋಗಿ ಬಂದು ಇಂತಹ ಮಾತನಾಡಲು ಆತನಿಗೆ ಯಾವುದೇ ನೈತಿಕತೆ ಇಲ್ಲ ಎಂದ್ರು.
 
ಇನ್ನು ಸಿವೋಟರ್ ಸಮೀಕ್ಷೆ ಸೇರಿದಂತೆ ಯಾವುದೇ ಸಮೀಕ್ಷೆಗಳು ಅಂತಿಮವಲ್ಲ. ಅವುಗಳೂ ಒಂದೊಂದು ಬಾರಿ ಸುಳ್ಳಾಗುತ್ತವೆ. ಹೀಗಾಗಿ ಅವುಗಳನ್ನೆಲ್ಲ ನಂಬಲು ಆಗೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಳ್ಳಿಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ