ಅನುಮಾನಕ್ಕೆ ಕಾರಣವಾಯ್ತು ಡಿಜಿ ಸತ್ಯನಾರಾಯಣ ಪರಪ್ಪನ ಅಗ್ರಹಾರ ಜೈಲಿನ ಭೇಟಿ

ಶನಿವಾರ, 15 ಜುಲೈ 2017 (12:07 IST)
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಡಿಐಜಿ ರೂಪಾ ವರದಿಯ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ತನಿಖೆಗೆ ಆದೇಶಿಸಿದ್ದರು. ಆದರೆ ತನಿಖಾಧಿಕಾರಿಗಳು ಆಗಮಿಸುವ ಮೊದಲೇ ಡಿಜಿ ಸತ್ಯನಾರಾಯಣ ದಿಡೀರ್ ಆಗಿ ಪರಪ್ಪನ  ಅಗ್ರಹಾರಕ್ಕೆ ಭೇಟಿ ನೀಡಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.


ಕಾರಾಗೃಹ ಡಿಜಿ ಸತ್ಯನಾರಾಯಣ ಶಶಿಕಲಾಗೆ ವಿಐಪಿ ಟ್ರೀಟ್ ಮೆಂಟ್ ನೀಡಲು ಲಂಚ ಪಡೆದಿದ್ದರು ಎಂದು ಡಿಐಜಿ ರೂಪಾ ವರದಿಯಲ್ಲಿ ಹೇಳಿದ್ದರು. ಇವರಿಬ್ಬರು ಅಧಿಕಾರಿಗಳ ಕೆಸರೆರಚಾಟದ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ತನಿಖೆಗೆ ಆದೇಶಿಸಿದ್ದರು. ಆದರೆ ತನಿಖಾಧಿಕಾರಿಗಳು ಬರುವ ಮೊದಲೇ ಡಿಜಿ ಸತ್ಯ ನಾರಾಯಣ ಜೈಲಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿರುವುದಲ್ಲದೆ, ಅಧಿಕಾರಿಗಳ ಜತೆ ಮಾತುಕತೆ ನಡೆಸಿರುವುದು ಅನುಮಾನ ಮೂಡಿಸಿದೆ.

ಈ ನಡುವೆ ಅವರನ್ನು ಮಾಧ್ಯಮಗಳು ಮಾತನಾಡಿಸುವ ಪ್ರಯತ್ನ ನಡೆಸಿತಾದರೂ ಪ್ರತಿಕ್ರಿಯಿಸದೇ ತೆರಳಿದೆ. ಇನ್ನೊಂದೆಡೆ ಡಿಐಜಿ ರೂಪಾ ವರದಿ ಬೆನ್ನಲ್ಲೇ ಇದೀಗ ಎಚ್ಚೆತ್ತುಕೊಂಡಿರುವ ಪರಪ್ಪನ ಜೈಲು ಅಧಿಕಾರಿಗಳು ‘ಸ್ವಚ್ಛತಾ’ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ.. ಬಿಕಿನಿಯಲ್ಲಿ ಮೈಮಾಟ ತೋರಿಸಿದ ದೀಪಿಕಾ ಪಡುಕೋಣೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ