ಬೆಂಗಳೂರು: ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿದ ಡಿಜಿಪಿ ರಾಮಚಂದ್ರರಾವ್‌ಗೆ ಸೇರಿದ ವಿಡಿಯೋಗಳು ವೈರಲ್ ಪ್ರಕರಣ ಸಂಬಂಧ ಎಸ್‌ಐಟಿಗೆ ವರದಿಯನ್ನು ಸಲ್ಲಿಸಿದ್ದಾರೆ.
ಸರ್ಕಾರಕ್ಕೆ 100 ಪುಟಗಳ ವರದಿ ಸಲ್ಲಿಸಿದ ಎಸ್‌ಐಟಿ, ವಿಡಿಯೋಗಳು ಡೀಪ್‌ಫೇಕ್ ಅಥವಾ ಎಐ ಅಲ್ಲ ಅಂತ ರಿಪೋರ್ಟ್ ನೀಡಲಾಗಿದೆ.
ಇದೀಗ ತನಿಖೆಯಲ್ಲಿ ವಿಡಿಯೋಗಳು ಡೀಪ್‌ಫೇಕ್, ಎಐ ಸೃಷ್ಟಿಯಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನೂ ವಿಡಿಯೋಗಳಲ್ಲಿನ ಯಾವುದೇ ದೃಶ್ಯಾವಳಿಗಳು ತಿರುಚಿಲ್ಲ, ಮಹಿಳೆಯರು ಹಲವು ಬಾರಿ ರಾಮಚಂದ್ರರಾವ್‌ರ ಕಚೇರಿಗೆ ಬಂದು ಹೋಗಿದ್ದಾರೆ.
ಜಾಲತಾಣದಲ್ಲಿ ವೈರಲ್ ಆಗಿದ್ದ ವಿಡಿಯೋಗಳನ್ನು ಎಸ್‌ಐಟಿ, ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ರಾಮಚಂದ್ರರಾವ್ 2016-17ರ ಅವಧಿಯಲ್ಲಿ ಬೆಳಗಾವಿ ಐಜಿಪಿಯಾಗಿದ್ದಾಗಿನ ವಿಡಿಯೋಗಳಿವು.
ಐಜಿಪಿ ಕಚೇರಿಯಲ್ಲೇ ಈ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಕೆಲಸ ಮಾಡ್ತಿರುವ ಚಾಲಕರು, ಸಿಬ್ಬಂದಿಯಿಂದ ವಿಡಿಯೋದಲ್ಲಿರುವ ಇಬ್ಬರು ಮಹಿಳೆಯರನ್ನು ಗುರುತು ಪತ್ತೆ
ಇನ್ನೂ ಕಚೇರಿಗೆ ಬರುತ್ತಿದ್ದ ಒಬ್ಬ ಮಹಿಳೆ ಉದ್ದೇಶಪೂರ್ವಕವಾಗಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಇನ್ನೂ ವಿಡಿಯೋ ವೈರಲ್ ಬೆನ್ನಲ್ಲೇ ಮಹಿಳೆಯರಿಬ್ಬರು ನಾಪತ್ತೆಯಾಗಿದ್ದಾರೆ.
ಪ್ರಕರಣ ಬೆಳಕಿಗೆ ಬಂದ ಬಳಿಕ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ತನಿಖೆಗಾಗಿ ಮಹಿಳೆಯರ ಹೇಳಿಕೆ ನಿರ್ಣಾಯಕವಾಗಿದೆ. ಇನ್ನೂ ನಾಪತ್ತೆಯಾಗಿರುವ ಮಹಿಳೆಯರ ಪತ್ತೆಗೆ ಶೋಧ ಕಾರ್ಯ ಚುರುಕುಗೊಳಿಸಲಾಗಿದೆ.
ರಾಮಚಂದ್ರರಾವ್ ಆರೋಪಿಸಿದಂತೆ ವಿಡಿಯೋಗಳು ಎಐ ಅಥವಾ ಡೀಪ್‌ಫೇಕ್ ವಿಡಿಯೋಗಳಲ್ಲ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ ನೇತೃತ್ವದಲ್ಲಿ ನಾಲ್ವರು ಐಪಿಎಸ್ ಅಧಿಕಾರಿಗಳ ತಂಡದಿಂದ ರಿಪೋರ್ಟ್