ಜಾತ್ರೆಗಳಿಗೆ ತಟ್ಟಿದ ಧರ್ಮ ದಂಗಲ್

ಗುರುವಾರ, 24 ನವೆಂಬರ್ 2022 (17:51 IST)
ಜಾತ್ರಾ ಮಹೋತ್ಸಗಳು ನಡೆಯುವ ಸಂದರ್ಭದಲ್ಲಿ ಹಿಂದೂಗಳಿಗೆ ಮಾತ್ರ  ವ್ಯಾಪಾರ ವಹಿವಾಟು ನಡೆಸುವ ಅವಕಾಶ ನೀಡುವಂತೆ ಆಗ್ರಹಿಸಲಾಗಿದೆ.ಹಿಂದೂ ಧರ್ಮದವರನ್ನು ಹೊರತು ಪಡಿಸಿ ಬೇರೆ ಧರ್ಮದವರಿಗೆ ವ್ಯಾಪಾರ ಮಾಡಲು ಅವಕಾಶ ನೀಡದಂತೆ ಹಿಂದೂ ಸಂಘಟನೆಗಳಿಂದ ಧಾರ್ಮಿಕ ದತ್ತಿ‌ ಇಲಾಖೆಗೆ ಹಾಗೂ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
 
ಬೆಂಗಳೂರಿನ ಕಡಲೆಕಾಯಿ ಪರಿಷೆಯಲ್ಲಿ ಅನ್ಯ ಧರ್ಮಿಯರು ವ್ಯಾಪಾರ ವಹಿವಾಟುಗಳಲ್ಲಿ ಭಾಗಿಯಾಗಿದ್ದು,ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಭಾಗದಲ್ಲಿ ಜಾತ್ರಾ ಮಹೋತ್ಸವಗಳು ಶುರುವಾಗುವುದರಿಂದ ಜಾತ್ರೆ ಸಂದರ್ಭದಲ್ಲಿ  ದೇವಸ್ಥಾನದ  ಆವರಣದಲ್ಲಿ ಹಿಂದುಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಮನವಿ ಮಾಡಲಾಗಿದ್ದು,2002 ರ ಧಾರ್ಮಿಕ ದತ್ತಿ ಇಲಾಖೆ ಕಾಯ್ದೆಯಲ್ಲಿಯೂ ಈ ಬಗ್ಗೆ ಉಲ್ಲೇಖವಿದ್ದು ,ಇದೇ ತಿಂಗಳು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ  ಚಂಪಾಕ ಷಷ್ಠಿ ಆಚರಣೆಯಲ್ಕಿಯೂ ಅನ್ಯಮತಿಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದೆದ್ದು ಹಿಂದೂ ಜನಜಾಗೃತಿ ಸಮಿತಿ ಅಧ್ಯಕ್ಷ ಮೋಹನ್ ಗೌಡ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ