ಬಿಜೆಪಿಯವರು ದೇಶಕ್ಕಾಗಿ ಸತ್ತಿದ್ದಾರಾ ? - ಸಿದ್ದರಾಮಯ್ಯ ಪ್ರಶ್ನೆ
ಸರ್ವಜ್ಞ ನಗರ ಕ್ಷೇತ್ರದಲ್ಲಿ ಆಯೋಜಿಸಿರುವ ಸ್ವಾತಂತ್ರ್ಯ ನಡಿಗೆಗೆ ಸಿದ್ದರಾಮಯ್ಯ ಚಾಲನೆ ನೀಡಿದರು.ವಿಧುರಾಶ್ವತ್ಥಕ್ಕೆ ತೆರಳುವುದಕ್ಕೂ ಮೊದಲು ಕೆ.ಜೆ ಜಾರ್ಜ್ ಕ್ಷೇತ್ರದಲ್ಲಿ ಸಿದ್ದರಾಮಯ್ಯ ನಡಿಗೆಗೆ ಚಾಲನೆ ನೀಡಿದ್ದಾರೆ.ಕೇಸರಿ, ಬಿಳಿ, ಹಸಿರು ಬಣ್ಣದ ಪೇಟ ಸಿದ್ದರಾಮಯ್ಯ ಸಿದ್ದರಾಮಯ್ಯ ಎಲ್ಲರ ಗಮನಸೆಳೆದಿದ್ದಾರೆ. ಇನ್ನು ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ ಇಂದು ನಾವೆಲ್ಲ ಸ್ವತಂತ್ರರಾಗಿದ್ದೇವೆ.ಇದಕ್ಕೆಲ್ಲಾ ಕಾಂಗ್ರೆಸ್ ಪಕ್ಷವೇ ಕಾರಣ.ದೇಶಕ್ಕಾಗಿ ಸಾವಿರಾರು ಜನ ಪ್ರಾಣ ತ್ಯಾಗ ಮಾಡಿದ್ದಾರೆ.ಆ.೧೫ರಂದು ೭೫ನೇ ಸ್ವಾತಂತ್ರೋತ್ಸವದ ನಡಿಗೆ ಹಮ್ಮಿಕೊಂಡಿದ್ದೇವೆ.ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುತ್ತಾರೆ.ಬೆಂಗಳೂರು ಸೇರಿದಂತೆ ಬೇರೆ ಬೇರೆ ಭಾಗದ ಜನರು ಭಾಗವಹಿಸುತ್ತಾರೆ.ಬಿಜೆಪಿಯವರು ದೇಶಕ್ಕಾಗಿ ಸತ್ತಿದ್ದಾರಾ ? ಸಾವರ್ಕರ್ ನ್ನ ಬಿಜೆಪಿಯವರು ಹಾಡಿ ಹೊಗಳುತ್ತಾರೆ.ಆದರೆ ಸಾವರ್ಕರ್ ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು ಜೈಲಿನಿಂದ ಹೊರ ಬರುತ್ತಾರೆ.ಮಹಾತ್ಮ ಗಾಂಧಿ ಇವರೇನಾದರೂ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ.ಬಿಜೆಪಿಯವರು ನಮಗೆ ದೇಶಭಕ್ತಿ ಬಗ್ಗೆ ಪಾಠ ಹೇಳಿಕೊಡುತ್ತಾರೆ.ಬಿಜೆಪಿಯವರಿಗೆ ಎಂದೂ ದೇಶಭಕ್ತಿ ಇರಲಿಲ್ಲ.ದೇಶಕ್ಕಾಗಿ ಎಂದೂ ಜೈಲಿಗೆ ಹೋದವರಲ್ಲ, ಪ್ರಾಣ ತ್ಯಾಗ ಮಾಡಿದವರಲ್ಲ ಹೆಡ್ಗೇವಾರ್, ಗೋಲ್ವಾಲ್ಕರ್ ದೇಶಕ್ಕಾಗಿ ಹೋರಾಡಿದ್ದಾರಾ ? ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಅಸಾಮಾಧಾನ ವ್ಯಕ್ತಪಡಿಸಿದಾರೆ.