ನಟ ಸುದೀಪ್ ಸಿಎಂ ಬಸವರಾಜ್ ಬೊಮ್ಮಾಯಿಗೆ ನನ್ನ ಬೆಂಬಲ ಎಂದು ಹೇಳಿದ್ದು, ಕಾಂಗ್ರೆಸ್ ಲೇವಡಿ ಮಾಡಲು ಆರಂಭಿಸಿತ್ತು.. ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ. ಕಾಂಗ್ರೆಸ್ ಈ ಹಿಂದೆ ನಟರನ್ನು ಕರೆತಂದಿರಲಿಲ್ವಾ? ನಟರನ್ನ ಬಳಸಿಕೊಂಡು ಪ್ರಚಾರ ಮಾಡಿರಲಿಲ್ವಾ? ವಿಪಕ್ಷಗಳ ಟೀಕೆ ಸರ್ವೆ ಸಾಮಾನ್ಯ..ಸುದೀಪ್ ಬಂದಿದ್ದರಿಂದ ವಿಪಕ್ಷಗಳಿಗೆ ತಳಮಳ ಶುರುವಾಗಿದೆ ಎಂದು ವಿಪಕ್ಷಗಳ ಹೇಳಿಕೆಗೆ ಸಿಎಂ ಬೊಮ್ಮಾಯಿ ಲೇವಡಿ ಮಾಡಿದ್ರು.. ಇನ್ನು BJP ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ನಟ ಸುದೀಪ್ BJP ಬೆಂಬಲ ಕುರಿತು ಪ್ರತಿಕ್ರಿಯಿಸಿದ್ದಾರೆ.. ಲೋಕತಂತ್ರ ವ್ಯವಸ್ಥೆಯಲ್ಲಿ ನಟ ಸುದೀಪ್ಗೆ ಯಾವುದೇ ಪಕ್ಷಕ್ಕೆ ಬೆಂಬಲ ಕೊಡುವ ಹಕ್ಕಿದೆ, ಕಾಂಗ್ರೆಸ್‌ನವರಿಗೆ ಸೋಲುವ ಭಯ.. ಹಾಗಾಗಿ ಸುದೀಪ್ ವಿರುದ್ಧ ಟೀಕೆ ಮಾಡ್ತಿದಾರೆ. ತನಿಖಾ ಸಂಸ್ಥೆಗಳ ಭಯದಿಂದ ಸುದೀಪ್ ಬೆಂಬಲ ಅಂತ ಕಾಂಗ್ರೆಸ್ ಟೀಕಿಸಿರೋದು ಸರಿಯಲ್ಲ, ಕಾಂಗ್ರೆಸ್ಗೆ ಯಾರಾದ್ರೂ ಬೆಂಬಲ ಕೊಟ್ಟರೆ ಆಗ ಅವರಿಗೂ ತನಿಖಾ ಸಂಸ್ಥೆಗಳ ಭಯ ಇದೆ ಅಂತ ಅರ್ಥನಾ ಎಂದು ಭಾಟಿಯಾ ಪ್ರಶ್ನಿಸಿದ್ರು.