ಡಿಐಜಿ ರೂಪಾಗೆ ಈಗ ನೂರಾನೆಯ ಬಲ ಬಂದಿದೆಯಂತೆ! ಕಾರಣವೇನು ಗೊತ್ತಾ?
ಶನಿವಾರ, 15 ಜುಲೈ 2017 (11:35 IST)
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ನಟರಾಜನ್ ಗೆ ವಿಐಪಿ ಆತಿಥ್ಯ ನೀಡಲಾಗುತ್ತಿದೆ ಎಂದು ಡಿಜಿಪಿ ಸತ್ಯನಾರಾಯಣ ವಿರುದ್ಧವೇ ತಿರುಗಿ ಬಿದ್ದ ಡಿಐಜಿ ರೂಪಾ ಮತ್ತಷ್ಟು ದಾಖಲೆಗಳನ್ನು ಬಿಡುಗಡೆ ಮಾಡಲಿದ್ದಾರೆಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇಷ್ಟೆಲ್ಲಾ ಸತ್ಯ ಹೊರಹಾಕಲು ಡಿಐಜಿ ರೂಪಾಗೆ ಈಗ ಮತ್ತಷ್ಟು ಬಲ ಬಂದಿದೆ.
ಅದಕ್ಕೆ ಕಾರಣ ದೇಶ ಕಂಡ ಇನ್ನೊಬ್ಬ ಅಪ್ರತಿಮ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಟ್ವಿಟರ್ ನಲ್ಲಿ ರೂಪಾ ಕ್ರಮಕ್ಕೆ ಶಹಬ್ಬಾಶ್ ಗಿರಿ ಕೊಟ್ಟಿದ್ದಾರೆ. ಟ್ವಿಟರ್ ಮೂಲಕ ಸಂದೇಶ ಬರೆದಿರುವ ಪುದುಚೇರಿ ಲೆಫ್ಟಿನೆಂಟ್ ಗ ಗವರ್ನರ್ ‘ಇಂತಹ ಇನ್ನಷ್ಟು ಐಪಿಎಸ್ ಅಧಿಕಾರಿಗಳು ನಮಗೆ ಬೇಕು’ ಎಂದು ಹೊಗಳಿದ್ದಾರೆ.
ಅಷ್ಟೇ ಅಲ್ಲ ಈ ಸಂದೇಶಕ್ಕೆ ಪ್ರಧಾನಿ ಮೋದಿ ಮತ್ತು ಅವರ ಕಚೇರಿಯ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ. ಈ ಸಂದೇಶಕ್ಕೆ ಪ್ರತಿಯಾಗಿ ಡಿಐಜಿ ರೂಪಾ ಕೂಡಾ ಧನ್ಯವಾದ ತಿಳಿಸಿದ್ದು, ನಿಮ್ಮಂತಹವರ ಮೆಚ್ಚುಗೆ ನನಗೆ ನೂರಾನೆಯ ಬಲ ಬಂದಿದೆ ಎಂದಿದ್ದಾರೆ. ಇದೀಗ ಸಿಎಂ ತಮಗೆ ನೋಟಿಸ್ ನೀಡಿರುವುದರಿಂದ ಬೇಸರಗೊಂಡಿರುವ ರೂಪಾ ಈ ಘಟನೆಯಿಂದಾಗಿ ನನಗೆ ಮತ್ತಷ್ಟು ಶತ್ರುಗಳು ಹಟ್ಟಿಕೊಂಡಿದ್ದಾರೆ. ಆದರೆ ಅಲ್ಲಿ ಏನೂ ನಡೀತಿಲ್ಲ ಎಂದ ಮೇಲೆ ನನ್ನನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ.