ರಾಜ್ಯದಲ್ಲಿ ಮೋದಿ ಸರ್ಕಾರದಿಂದ ತಾರತಮ್ಯ

geetha

ಸೋಮವಾರ, 5 ಫೆಬ್ರವರಿ 2024 (15:21 IST)
ಬೆಂಗಳೂರು-ರಾಜ್ಯಕ್ಕೆ ಮೋದಿ ಸರ್ಕಾರ ತಾರತಮ್ಯ ಆಗಿದೀಯಾ ಅಥವಾ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಆಗಿತ್ತಾ ಎಂಬ ವಿಚಾರವಾಗಿ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.ಮನಮೋಹನ್ ಸಿಂಗ್ ಸರ್ಕಾರದಲ್ಲಿ ತಾರತಮ್ಯ ಆಗಿರಲಿಲ್ಲ.ತಾರತಮ್ಯ ಆಗಿದ್ರೆ ಬಿಜೆಪಿಯವರೇ ಹೇಳ್ಳಿ.ಆ ಕಾಲಕ್ಕೆ ಬಿಜೆಪಿಯವರೇ ವಿರೋಧ ಪಕ್ಷದಲ್ಲಿ ಇದ್ರು.ಯಾವ ರೀ ಮನಮೋಹನ್ ಸಿಂಗ್ ನಡೆದುಕೊಳ್ತಾ ಇದ್ರು ಅಂತ ಹೇಳಿ.ಒಬ್ಬ ಆರ್ಥಿಕ ತಜ್ಞರಾಗಿ ಕಾಂಗ್ರೆಸ್ ನ ಪ್ರಧಾನಮಂತ್ರಿ ಅಂತ ಅವರನ್ನ ಬಿಟ್ಟುಬಿಡಿ.ಆರ್ಥಿಕ ತಜ್ಞರಾಗಿ ಈ ದೇಶ ಆರ್ಥಿಕ ಸಮನಾಗಿ ಇಟ್ಟುಕೊಳ್ಳಲು ಸಮನಾಗಿ ನೋಡ್ತಾ ಇದ್ರು.ಮನಮೋಹನ್ ಪ್ರಧಾನಿಯಾಗಿದ್ದಾಗ ಒಂದು ಬಾರಿ ಪ್ರವಾಹ ಆಗಿತ್ತು.

ವೈಮಾನಿಕ ಸಮೀಕ್ಷೆ ಮಾಡಿ 2 ಸಾವಿರ ಕೋಟಿ ಪರಿಹಾರ ಘೋಷಣೆ ಮಾಡಿದ್ರು.ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ, ಪ್ರಧಾನಿಗಳು ಪರಿಹಾರ ಕೊಟ್ಟಿಲ್ಲ.ಇದು ರಾಜಕೀಯವಾಗಿ ನಾವು ಮಾಡಿಲ್ಲ.ನಮಗೆ ಬರಬೇಕಾದ ಹಣ ಕೊಡಿ.ನಾವು ಯಾವುದೇ ಸ್ಪೆಷಲ್ ಅನುದಾನ ಕೊಡಿ ಅಂತ ಕೇಳಿಲ್ಲ.ಕೇಂದ್ರ ಸರ್ಕಾರ ಶ್ವೇತ ಪತ್ರ ಹೊರಡಿಸಲಿ .ನಾವು ಇಲ್ಲಿ ರಾಜ್ಯದಲ್ಲಿ ಶ್ವೇತಪತ್ರ ಹೊರಡಿಸ್ತೀವಿ.ಕೇಂದ್ರ ಸರ್ಕಾರ ಎಷ್ಟು ಅನುದಾನ ಕೊಟ್ಟಿದ್ದಾರೆ.ಎಷ್ಟು ಟ್ಯಾಕ್ಸ್ ಸಂಗ್ರಹ ಆಗಿದೆ ಎಂಬುದನ್ನು ಶ್ವೇತಪತ್ರ ಹೊರಡಿಸಲಿ ಎಂದು ಕೇಂದ್ರ ಸರ್ಕಾರಕ್ಕೆ  ಡಾ.ಜಿ.ಪರಮೇಶ್ವರ್ ಒತ್ತಾಯಿಸಿದ್ದಾರೆ.
 
ಫೆಬ್ರವರಿ 7 ರಂದು ದೆಹಲಿಯಲ್ಲಿ ಪ್ರತಿಭಟನೆ ವಿಚಾರವಾಗಿ ನಗರದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದು,ಸಿಎಂ,ಡಿಸಿಎಂ, ಶಾಸಕರು,ಎಂಎಲ್ಸಿಗಳು ಎಲ್ಲರು ಹೋಗ್ತಾ ಇದ್ದೀವಿ.ಇನ್ನೂ ಮಂಡ್ಯದಲ್ಲಿ ಫೆಬ್ರವರಿ ‌7 ಮತ್ತು  9 ರಂದು ಬಂದ್ ವಿಚಾರವಾಗಿ ಬಂದ್ ಮಾಡ್ಲಿ, ಅವರ ಕೆಲಸ ಅವರು ಮಾಡ್ಲಿ.ನಮ ಕೆಲಸ ನಾವು ಮಾಡ್ತೀವಿ.ಕೆರೆಗೋಡಿವಿನ ರೀತಿಯಲ್ಲಿ ಬೆಳಗಾವಿಯ ಎಂ.ಕೆ.ಹುಬ್ಬಳ್ಳಿಯಲ್ಲಿ ಘಟನೆ ವಿಚಾರವಾಗಿ  ಆಗುವ ಸೂಚನೆ ಇದೆ ಅದಕ್ಕೆ ಏನು ತಯಾರಿ ಮಾಡಿಕೊಳ್ಳಬೇಕು.ಆ ತಯಾರಿ ಮಾಡಿಕೊಂಡಿದ್ದೇವೆ.ಅಹಿತಕರ ಘಟನೆ ಆಗದಂತೆ ನೋಡಿಕೊಳ್ತೀವಿ ಎಂದು ಪರಮೇಶ್ವರ್ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ