ಡಿಸ್ನಿಲ್ಯಾಂಡ್ ಮಾದರಿ ವಿವಾದ: ಸಿಎಂ ಮೇಲೆ ಶಾಸಕನ ಅಸಮಧಾನ!

ಗುರುವಾರ, 22 ನವೆಂಬರ್ 2018 (19:03 IST)
ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆಆರ್‌ಎಸ್ ಬೃಂದಾವನವನ್ನು ಅಭಿವೃದ್ಧಿ ಮಾಡುವ ವಿಚಾರವನ್ನ ಸ್ಥಳೀಯ ಶಾಸಕನಾದ ನನಗೆ ಅಧಿಕಾರಿಗಳು ತಿಳಿಸಿಲ್ಲ ಅಂತ ಶ್ರೀರಂಗಪಟ್ಟಣ ಶಾಸಕ ಬೇಸರ ವ್ಯಕ್ತಪಡಿಸಿದ್ದಾರೆ.

ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಅರಕೆರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರವೀಂದ್ರ ಶ್ರೀಕಂಠಯ್ಯ, ಶ್ರೀರಂಗಪಟ್ಟಣದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕಿದೆ ಎಂದು ನಾನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿ ಪ್ರಸ್ತಾಪಿಸಿದ್ದೆ. ನನ್ನ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ್ದ ಅವ್ರು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆಆರ್‌ಎಸ್ ಬೃಂದಾವನ ಅಭಿವೃದ್ಧಿ ಮಾಡುವ ಯೋಜನೆ ಘೋಷಿಸಿದ್ದಾರೆ. ಆದರೆ ಈ ವಿಚಾರವನ್ನು ಯಾವದೇ ಅಧಿಕಾರಿಗಳು ಸ್ಥಳೀಯ ಶಾಸಕನಾದ ನನ್ನ ಗಮನಕ್ಕೆ ತಂದಿಲ್ಲ. ಹಾಗಾಗಿ ಸರ್ಕಾರಕ್ಕೆ ಪತ್ರ ಬರೆದು ಯೋಜನೆ ಬಗ್ಗೆ ಮಾಹಿತಿ ನೀಡಿ ಎಂದು ಮನವಿ ಮಾಡ್ತೀನಿ ಎಂದರು.

ಇನ್ನೂ ಈ ಯೋಜನೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ತೊಂದರೆಯಾಗಲಿದೆ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಮೊದಲು ನಮಗೆ ಅಣೆಕಟ್ಟೆಯ ಸುರಕ್ಷತೆ ಮುಖ್ಯ. ನಂತರವಷ್ಟೇ ಅಭಿವೃದ್ಧಿ ವಿಚಾರ.

ಯೋಜನೆ ಬಗ್ಗೆ ಕೆಆರ್‌ಎಸ್ ಸುತ್ತಮುತ್ತಲ ನಿವಾಸಿಗಳಿಗೆ ಆತಂಕ ಇದೆ. ಭೂಮಿ ಕಳೆದುಕೊಳ್ಳವ ಆತಂಕದಲ್ಲಿ ಅಲ್ಲಿನ ಜನರಿದ್ದಾರೆ.  ಆದರೆ ಸ್ಥಳೀಯ ಜನರಿಗೆ ತೊಂದರೆ ಆಗದಂತೆ ಯೋಜನೆ ರೂಪಿಸಬೇಕು. ಅಭಿವೃದ್ಧಿ ವಿಚಾರದಲ್ಲಿ ನನ್ನ ವಿರೋಧ ಇಲ್ಲ. ಈ ಯೋಜನೆ ಬಗ್ಗೆ ಮಾಹಿತಿ ಇಲ್ಲ. ಹಾಗಾಗಿ ಹೆಚ್ಚಿನದೇನು ಗೊತ್ತಿಲ್ಲ ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ