ಕನ್ನಡದ ವಿಚಾರಕ್ಕೆ ಜಗಳ- ದೂರು ದಾಖಲು

ಬುಧವಾರ, 30 ನವೆಂಬರ್ 2022 (15:33 IST)
ಕನ್ನಡದ ವಿಚಾರಕ್ಕೆ ಜಗಳ ನಡೆದು ನೀಲಂಜಿತ್ ಕೌರ್ (46) ಎಂಬ ಮಹಿಳೆಯಿಂದ ದೂರು ದಾಖಲಾಗಿದೆ. ವಾಹನದಲ್ಲಿ ಹೋಗಬೇಕಾದರೆ ಮಗು ಅಡ್ಡ ಬಂದಿತ್ತು .ಈ ವೇಳೆ ಬೇರೆ ಭಾಷೆಯಲ್ಲಿ ಪೋಷಕರಿಗೆ ಮಗುವನ್ನ ಸರಿಯಾಗಿ ನೋಡಿಕೊಳ್ಳಿ ಎಂದು ನೀಲಂಜಿತ್ ಹೇಳಿದ್ರು.ಈ ವೇಳೆ ನಿನಗೆ ಕನ್ನಡ ಬರೋದಿಲ್ವೆ .? ಕರ್ನಾಟಕದಲ್ಲಿರಬೇಕಾದರೆ ಕನ್ನಡ ಮಾತಾಡು ಎಂದು ಹೇಳಿದ್ದರಂತೆ .ಈ ವಿಚಾರ ಅಲ್ಲಿದ್ದ ಜನರು ಹಾಗೂ ನೀಲಂ ಕೌರ್ ನಡುವೆ ಜಗಳವಾಗಿದೆ .ಈ ವೇಳೆ ವಿಡೀಯೋ ಮಾಡಲು ಹೋದಾಗ ಅಲ್ಲಿದ್ದ ಕೆಲ ಮಹಿಳೆಯರಿಂದ ನೀಲಂಜಿತ್ ಕೌರ್ ಮೇಲೆ ಹಲ್ಲೆ  ಮಾಡಿದ್ದಾರೆ.ಪ್ಲಾಸ್ಟಿಕ್ ಪೈಪ್ ನಿಂದ ಹಲ್ಲೆ ನಡೆಸಿದ್ದಾರೆಂದು ದೂರು ದಾಖಲಾಗಿದೆ.ದೊಡ್ಡಬೊಮ್ಮಸಂದ್ರ ಬಳಿ ಇರುವ ವಿಶಾಲ್ ಮೆಡಿಕಲ್ ಬಳಿ ನಡೆದ ಘಟನೆ ಇದ್ದಾಗಿದ್ದು,ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ