ಗುಡಿಸಲಿನಲ್ಲಿ ಇರೋ ಮಹಿಳೆಯಿಂದ 140 ಮನೆಗಳಿಗೆ ಅಕ್ಕಿ ಹಂಚಿಕೆ

ಶುಕ್ರವಾರ, 24 ಏಪ್ರಿಲ್ 2020 (18:19 IST)
ತಾನು ಗುಡಿಸಲಿನಲ್ಲಿ ಇದ್ದರೂ, ಕಷ್ಟದಲ್ಲಿದ್ದರೂ ಸಹ ಲಾಕ್ ಡೌನ್ ಸಮಯದಲ್ಲಿಯೇ 140 ಮನೆಗಳಿಗೆ ಅಕ್ಕಿ ಹಂಚಿಕೆ ಮಹಿಳೆಯೊಬ್ಬರು ಮಾದರಿಯಾಗಿದ್ದಾರೆ.

ಕೊರೊನಾ ವೈರಸ್ ಹಿನ್ನೆಲೆ ಇದೀಗ ಉಡುಪಿ ಜಿಲ್ಲೆಯಾದ್ಯಂತ ಲಾಕ್‍ಡೌನ್ ಆಗಿದ್ದು, ಮಧ್ಯಮ ಹಾಗೂ ಬಡ ವರ್ಗದ ಕುಟುಂಬದ ಸದಸ್ಯರು ಅನೇಕ ಕಷ್ಟ ಎದುರಿಸುತ್ತಿದ್ದಾರೆ. ಇನ್ನು ಉಡುಪಿಯ ಮಲ್ಪೆ ನಿವಾಸಿ ಶಾರದಕ್ಕ ಎಂಬವರು ತಮ್ಮ ಸೇವೆಯಿಂದ ಇದೀಗ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಮಲ್ಪೆ ಬಳಿ ಪುಟ್ಟ ಗುಡಿಸಲಲ್ಲಿ ವಾಸ ವಾಗಿರುವ ಇವರು, ಅಲ್ಲೋ ಇಲ್ಲೋ ಸಿಕ್ಕಿದ ಮೀನು ಮಾರಿ ಜೀವನ ಸಾಗಿಸುತ್ತಿದ್ದಾರೆ. ಶಾರದಕ್ಕ 140 ಮನೆಗೆ ಸುಮಾರು 700 ಕೆಜಿ ಅಕ್ಕಿ ಹಂಚಿ ತಮ್ಮ ಔದಾರ್ಯ ಗುಣ ತೋರಿಸಿದ್ದಾರೆ.

ಇನ್ನು ತನಗೆ ಪಡಿತರ ಚೀಟಿಯಲ್ಲಿ ಸಿಕ್ಕಿರುವ ಅಕ್ಕಿಯನ್ನು ಕೂಡಾ ಇವರು ಕೂಲಿ ಕಾರ್ಮಿಕರಿಗೆ ಹಂಚಿ ಸೇವೆ ಎಂಬ ಪದಕ್ಕೆ ನಿಜವಾದ ಅರ್ಥ ತೋರಿಸಿಕೊಟ್ಟಿದ್ದಾರೆ. ಇನ್ನು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಶಾರದಕ್ಕ ಅವರ ನಿವಾಸಕ್ಕೆ ತೆರಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ