ಬಿಬಿಎಂಪಿ ಒಣಗಿದ ಮತ್ತು ಶಿಥಿಲಗೊಂಡಿರುವ ಮರಗಳನ್ನು ನಿರ್ವಹಣೆ ಮಾಡದಿರುವ ಕಾರಣ, ಮರದ ಕೊಂಬೆ ಸಿದ್ದಪ್ಪ ಅವರ ಬಿದ್ದು ಸಾವನ್ನಪ್ಪಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದರು. ಈ ದುರ್ಘಟನೆ ನಡೆದು ಒಂದು ವರ್ಷ ಕಳೆದರೂ ಪಾಲಿಕೆಯಿಂದ ಸೂಕ್ತ ಪರಿಹಾರ ಧನ ಸಿಗದೆ ಮೃತ ಸಿದ್ದಪ್ಪನ ಪತ್ನಿ ಗೀತಾ ಮತ್ತು ಮಗಳು ನಂದಿತ ದೊರೆತಿಲ್ಲ.
ಪತ್ನಿಗೆ ಕ್ಯಾನ್ಸರ್ ಮೂರನೇ ಸ್ಟೇಜ್:
ನನಗೆ ಕ್ಯಾನ್ಸರ್ ಮೂರನೇ ಸ್ಟೇಜ್ ನಲ್ಲಿದೆ. ಪ್ರಾಯಕ್ಕೆ ಬಂದಿರೋ ನನ್ನ ಮಗುಳಿಗೆ ಯಾರೂ ದಿಕ್ಕಿಲ್ಲ. ಏನಾದರೂ ಪರಿಹಾರ ಧನ, ಕೆಲಸ ಕೊಡಿಸುವಂತೆ ಪಾಲಿಕೆ ಅಧಿಕಾರಿಗಳಲ್ಲಿ ಕೇಳುತ್ತಿದ್ದೇನೆ. ಆದರೂ ಯಾವುದೇ ಪರಿಹಾರ ದೊರೆತಿಲ್ಲ ಎಂದು ಮೃತ ಸಿದ್ದಪ್ಪನ ಪತ್ನಿ ಗೀತಾ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಪರಿಹಾರ ನೀಡದಿದ್ದರೆ ಕಾನೂನು ಹೋರಾಟ:
ಬಿಬಿಎಂಪಿ ವತಿಯಿಂದ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಇಲ್ಲದಿದ್ದಲ್ಲಿ ಕಾನೂನು ಹೋರಾಟ ಮಾಡಲಾಗುವುದು. ಪ್ರಾರಂಭದಲ್ಲಿ ಸ್ವಲ್ಪ ಆಸ್ಪತ್ರೆ ಖರ್ಚಿಗೆ ಸಾರ್ವಜನಿಕರು, ಕೆಲ ಪಕ್ಷದ ಕಾರ್ಯಕರ್ತರು ಕೇಳಿಕೊಂಡಾಗ ಸಹಾಯ ಮಾಡಿದ ಪಾಲಿಕೆ ನಂತರ ಯಾವುದೇ ಪರಿಹಾರ ನೀಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಅಮರೇಶ್ ದೂರಿದ್ದಾರೆ.