ಗೆದ್ದ ಖುಷಿಯಲ್ಲಿ ಡಿಕೆಶಿ ಕಣ್ಣೀರು

ಶನಿವಾರ, 13 ಮೇ 2023 (18:01 IST)
Photo Courtesy: Twitter
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನಗಳನ್ನು ಗೆದ್ದುಕೊಂಡು ಸ್ಪಷ್ಟ ಬಹುಮತ ಪಡೆದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಕಣ್ಣೀರು ಹಾಕಿದ್ದಾರೆ.

ಪ್ರಚಂಡ ಗೆಲುವಿನ ಬಳಿಕ ಮಾಧ‍್ಯಮಗಳ ಮುಂದೆ ಮಾತನಾಡುವಾಗ ಡಿಕೆಶಿ ಕಣ್ಣಲ್ಲಿ ನೀರು ಜಿನುಗಿತ್ತು. ಭಾವುಕರಾಗಿಯೇ ಗೆಲುವಿನ ಬಗ್ಗೆ ಮಾತನಾಡಿದ್ದಾರೆ.

‘ಈ ಬಾರಿ ಕರ್ನಾಟಕದಲ್ಲಿ ಗೆದ್ದೇ ಗೆಲ್ಲುವೆವು ಎಂದು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ಭರವಸೆ ನೀಡಿದ್ದೆವು. ಅದರಂತೆ ಮಾಡಿದ್ದೇವೆ. ಈ ಗೆಲುವು ಜನತೆಯದ್ದು’ ಎಂದು ಭಾವುಕರಾಗಿದ್ದಾರೆ ಡಿಕೆಶಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ