ವರ್ಗಾವಣೆ ವಿಚಾರದಲ್ಲಿ ಡಿಕೆಶಿ-ಎಚ್ ಡಿ ರೇವಣ್ಣ ಫೈಟ್
ತಮ್ಮ ಗಮನಕ್ಕೆ ಬಾರದೇ ತಮ್ಮ ಇಲಾಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದು ಸಚಿವ ಡಿಕೆಶಿ, ಸಿಎಂ ಕುಮಾರಸ್ವಾಮಿಯವರಿಗೆ ದೂರವಾಣಿ ಮುಖಾಂತರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಆದರೆ ಡಿಕೆಶಿ ಆರೋಪಕ್ಕೆ ಉತ್ತರಿಸಿರುವ ಎಚ್ ಡಿ ರೇವಣ್ಣ ತನಗೆ ಸಂಬಂಧಪಡದ ಇಲಾಖೆಗಳ ಬಗ್ಗೆ ನಾನೇಕೆ ಹಸ್ತಕ್ಷೇಪ ಮಾಡಲಿ? ವರ್ಗಾವಣೆ ಮಾಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದಿದ್ದಾರೆ. ಆದರೆ ಸಮನ್ವಯ ಸಮಿತಿ ಸಭೆಯಲ್ಲೂ ಡಿಕೆಶಿ ಈ ವಿಚಾರ ಪ್ರಸ್ತಾಪಿಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.