ನನ್ನ ಹೆದರಿಸಲು ಬಂದರೆ ನಾನು ಹೆದರೋನಲ್ಲ: ಡಿಕೆ ಶಿವಕುಮಾರ್

ಬುಧವಾರ, 20 ಜೂನ್ 2018 (12:11 IST)
ಬೆಂಗಳೂರು: ಐಟಿ ದಾಳಿ ಸಂದರ್ಭಹಣಕಾಸಿನ ಅವ್ಯವಹಾರ ಪ್ರಕರಣದಲ್ಲಿ ಸಿಲುಕಿರುವ ಸಚಿವ ಡಿಕೆ ಶಿವಕುಮಾರ್ ಮಾಧ್ಯಮಗಳ ಮುಂದೆ ಹರಿಹಾಯ್ದಿದ್ದಾರೆ.

‘ನನ್ನನ್ನೇ ಯಾಕೆ ಟಾರ್ಗೆಟ್ ಮಾಡಲಾಗುತ್ತಿಲ್ಲ. ನಾನೇನೂ ತಪ್ಪೇ ಮಾಡಿಲ್ಲ. ನನ್ನನ್ನು ಹೆದರಿಸಲು ಬಂದ್ರೆ ನಾನು ಹೆದರಿ ಕೂರವವನಲ್ಲ. ಈ ದೇಶದಲ್ಲಿ ಕಾನೂನು ಇದೆ. ನ್ಯಾಯಸ್ಥಾನದ ಮೇಲೆ ನನಗೆ ನಂಬಿಕೆ ಇದೆ. ಎಲ್ಲವನ್ನೂ ಎದುರಿಸುತ್ತೇನೆ. ಐಟಿ ಅಧಿಕಾರಿಗಳಿಗೆ ಬೇಕಾದ ಸಹಕಾರ ಕೊಡುತ್ತೇನೆ. ನನಗೆ ಸಮನ್ಸ್ ಬಂದಿಲ್ಲ, ತನಿಖೆಗೆ ಸಹಕರಿಸುವಂತೆ ನೋಟಿಸ್ ಬಂದಿದೆಯಷ್ಟೇ’ ಎಂದು ಮಾಧ್ಯಮಗಳ ಮುಂದೆ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇನ್ನು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪಗೆ ಪರೋಕ್ಷವಾಗಿ ಟಾಂಗ್ ನೀಡಿದ ಡಿಕೆಶಿ ‘ಬಿಜೆಪಿಯವರು ಯಾರನ್ನು ಸಿಎಂ ಮಾಡಬೇಕೆಂದಿದ್ದಾರೋ ಅವರ ಅಕ್ರಮಗಳ ಪಟ್ಟಿ ನೀಡಲಾ? ನನ್ನ ಬಳಿಯೂ ಹಲವು ಡೈರಿಗಳಿವೆ. ಯಾರ ಮನೆಯಲ್ಲಿ ಡೈರಿಯಿದೆ. ಯಾರಿಗೆ ಎಷ್ಟು ಕೊಟ್ಟಿದ್ದಾರೆ ಎನ್ನುವುದೆಲ್ಲವೂ ನನಗೆ ಗೊತ್ತು. ಸಮಯ ಬಂದಾಗ ಒಂದೊಂದೇ ಹೊರ ಹಾಕುತ್ತೇನೆ’ ಎಂದು ಡಿಕೆಶಿ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ