ಯತೀಂದ್ರನೇ ನಮ್ಮ ಹೈಕಮಾಂಡ್, ಅವರು ಹೇಳಿದ್ದನ್ನು ಕೇಳೋಣ: ಡಿಕೆ ಶಿವಕುಮಾರ್ ಟಾಂಗ್

Krishnaveni K

ಶುಕ್ರವಾರ, 6 ಫೆಬ್ರವರಿ 2026 (15:06 IST)
ಮಂಗಳೂರು: ಯತೀಂದ್ರನೇ ನಮ್ಮ ಹೈಕಮಾಂಡ್ ಅವರು ಏನು ಮಾತು ಹೇಳ್ತಾರೆ. ಅದನ್ನು ಗೌರವದಿಂದ ಸ್ವೀಕರಿಸೋಣ ಎಂದು ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ ಪುತ್ರ ಯತೀಂದ್ರ ನಮ್ಮ ತಂದೆಯವರಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಅವರೇ ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ. ಹೈಕಮಾಂಡ್ ಯಾರ ಒತ್ತಡಕ್ಕೂ ಮಣಿದಿಲ್ಲ ಎಂದಿದ್ದಾರೆ.

ಅವರ ಹೇಳಿಕೆಗೆ ಡಿಕೆಶಿ ಕೌಂಟರ್ ಕೊಟ್ಟಿದ್ದಾರೆ. ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್ ‘ಯತೀಂದ್ರ ಅವರೇ ನಮ್ಮ ಹೈಕಮಾಂಡ್. ಅವರು ಏನು ಹೇಳ್ತಾರೆ ಅದನ್ನು ನಾವು ಗೌರವದಿಂದ ಕೇಳೋಣ. ಯತೀಂದ್ರ ಹೈಕಮಾಂಡ್ ಅವರು ಹೇಳಿದ್ರೆ ಮುಗೀತು’ ಎಂದು ಕೌಂಟರ್ ಕೊಟ್ಟಿದ್ದಾರೆ.

ನಂತರ ಮಾತನಾಡಿರುವ ಅವರು ಯಾರು ಏನೇ ಹೇಳಿದ್ರೂ ದೆಹಲಿಯವರು ಹೇಳಬೇಕು. ನಾನು ಯಾರ ಹೇಳಿಕೆಗೂ ಪ್ರತಿಕ್ರಿಯೆ ಕೊಡಲ್ಲ. ಹೈಕಮಾಂಡ್ ನವರು ಏನು ಹೇಳ್ತಾರೆ ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತೇವೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ