ಕುರ್ಚಿ ದಕ್ಕಿಸಿಕೊಳ್ಳುವ ತವಕದಲ್ಲಿರುವ ಡಿಕೆಶಿಗೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳುವ ತಾಕತ್ತಿಲ್ಲ: ಆರ್ ಅಶೋಕ್

Sampriya

ಬುಧವಾರ, 1 ಜನವರಿ 2025 (16:56 IST)
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಸಚಿವ ನಾಗೇಂದ್ರ ಅವರಿಗೊಂದು ನ್ಯಾಯ, ಎಐಸಿಸಿ ಅಧ್ಯಕ್ಷರ ಸುಪುತ್ರನಿಗೆ ಮತ್ತೊಂದು ನ್ಯಾಯ! ಇಂತಹ ಎಡಬಿಡಂಗಿಗಳು ಅಂಬೇಡ್ಕರ್ ಬಗ್ಗೆ, ಸಮಾನತೆ ಬಗ್ಗೆ ಭಾಷಣ ಬಿಡುವ ಪುಂಗಿದಾಸರುಗಳು ಎಂದು ವಿರೋಧ ಪಕ್ಷದ ನಾಯಕ ಆರ್‌ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಕುರ್ಚಿ ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಪ್ರಿಯಾಂಕ್‌  ಖರ್ಗೆ ಅವರ ರಾಜೀನಾಮೆ ಕೇಳುವ ಧೈರ್ಯವಿಲ್ಲ.

ಕುರ್ಚಿ ದಕ್ಕಿಸಿಕೊಳ್ಳುವ ತವಕದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರಿಗೆ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಕೇಳುವ ತಾಕತ್ತಿಲ್ಲ.

ಒಟ್ಟಿನಲ್ಲಿ ಎಐಸಿಸಿ ಅಧ್ಯಕ್ಷರಾದ ಖರ್ಗೆ ಅವರ ಸುಪುತ್ರ ಕರ್ನಾಟಕ ಕಾಂಗ್ರೆಸ್ ನ ಅನಭಿಷಿಕ್ತ ನಿಜಾಮ ಅನ್ನಿಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ