ಐಟಿ ದಾಳಿ ಬೆನ್ನಲ್ಲೇ ಡಿಕೆಶಿ ಬೆನ್ನತ್ತಿದ ಮತ್ತೊಂದು ಪ್ರಕರಣ..?
ವರ ಮಹಾಲಕ್ಷ್ಮೀ ಹಬ್ಬದ ದಿನವೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ಮುಂದುವರೆದಿರುವ ಬೆನ್ನಲ್ಲೇ ಐಟಿ ಇಲಾಖೆಯಿಂದ ನಿನ್ನೆ ಬೆಳಗ್ಗೆಯೇ ಬೆಚ್ಚಿ ಬೀಳಿಸುವ ಸುದ್ದಿ ಹೊರಬಿದ್ದಿದೆ.
ಈ ಮಧ್ಯೆ ಐಟಿ ಅಧಿಕಾರಿಗಳು ವಶಪಡಿಸಿಕೊಮಡಿರುವ ಹರಿದ ದಾಖಲೆಗಳು ಸಿಕ್ಕಿರುವುದು ಟೈಮ್ಸ್ ನೌ ವರದಿ ಮಾಡಿದೆ. ಈಗಾಗಲೇ ಐಟಿ ದಾಳಿಯಿಂದ ತತ್ತರಿಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ಇದು ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಐಟಿ ದಾಳಿ ವೇಳೆ ದಾಖಲೆ ಹರಿಯುವ ಕೆಲಸ ನಡೆಯುತ್ತಿತ್ತು ಎಂದು ಜೇಟ್ಲಿ ಹೇಳಿದ್ದರು.