ಬಿಜೆಪಿ ಗೆಲ್ಲಲು ಡಿಸಿಎಂ ಪರಮೇಶ್ವರ್ ಕಾರಣ-ಹೊಸ ಬಾಂಬ್ ಸಿಡಿಸಿದ ಬಿಜೆಪಿ ಮುಖಂಡ

ಮಂಗಳವಾರ, 4 ಜೂನ್ 2019 (11:12 IST)
ತುಮಕೂರು : ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಡಿಸಿಎಂ ಪರಮೇಶ್ವರ್ ಕಾರಣ  ಎಂದು ಬಿಜೆಪಿ ಮುಖಂಡ ರಾಮಾಂಜನೇಯ ಹೊಸ ಬಾಂಬ್ ಸಿಡಿಸಿದ್ದಾರೆ.




ಬಸವರಾಜು ಗೆಲ್ಲಿಸಲು ಡಿಸಿಎಂ ಪರಮೇಶ್ವರ್ ಸಾಥ್ ಕೊಟ್ಟಿದ್ದಾರೆ. ಬಿಜೆಪಿ ಗೆಲ್ಲಿಸುವಲ್ಲಿ ಪರಮೇಶ್ವರ್ ಸಹಕಾರ ನೂರಕ್ಕೆ ಸಾವಿರಪಟ್ಟು ಇದೆ. ಪರಮೇಶ್ವರ್ ಸಹಕಾರ ಬಿಜೆಪಿಗೆ ಸಂಪೂರ್ಣ ಸಿಕ್ಕಿದೆ. ಬಿಜೆಪಿ ಮುಖಂಡನಾಗಿ ನಾನು ಹತ್ತಿರದಿಂದ ನೋಡಿದ್ದೇನೆ ಎಂದು ರಾಮಾಂಜನೇಯ ಹೇಳಿದ್ದಾರೆ.


ಹಾಗೇ ಮೋದಿ ಕೈ ಬಲಪಡಿಸಲು ಸಹಕರಿಸಿದ ಪರಮೇಶ್ವರ್ ಗೆ ಧನ್ಯವಾದ ತಿಳಿಸಿದ ಅವರು, ಪರಮೇಶ್ವರ್ ಚಾಣಾಕ್ಷತನ ದೇವೆಗೌಡರ ಚಾಣಾಕ್ಷತೆಗಿಂತ ಮೀರಿದ್ದು. ಪ್ಲಾನ್ ಮಾಡಿ ದೇವೇಗೌಡರನ್ನು ಸೋಲಿಸಿ ಸೇಡು ತೀರಿಸಿಕೊಂಡ್ರು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ