ಮನೆ ಮುಂದೆ ಬೈಕ್ ನಿಲ್ಲಿಸ್ತೀರಾ? ಹುಷಾರ್!

ಮಂಗಳವಾರ, 12 ಫೆಬ್ರವರಿ 2019 (15:08 IST)
ಮನೆಗಳ ಮುಂದೆ ನಿಲ್ಲಿಸಲಾಗಿರುವ ಬೈಕ್ ಗಳಿಗೆ ಬೆಂಕಿ ಹಚ್ಚುವ ಮೂಲಕ ಕಿಡಿಗೇಡಿಗಳು ಜನರಲ್ಲಿ ಆತಂಕ ಸೃಷ್ಟಿಸಿದ್ದಾರೆ.  
ಮನೆ ಮುಂದೆ ನಿಲ್ಲಿಸಲಾಗಿದ್ದ ಬೈಕ್ ಗಳಿಗೆ ಬೆಂಕಿ ಹಚ್ಚುವ ಮೂಲಕ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ.

ಶಿವಮೊಗ್ಗದ ನ್ಯೂ ಮಂಡಳಿ ಮೊದಲನೇ ತಿರುವಿನ ಬಳಿಯಲ್ಲಿರುವ ಮನೆಗಳ ಮುಂದೆ ನಿಲ್ಲಿಸಲಾಗಿದ್ದ ಆರು ಬೈಕ್ ಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ಆರಿಸಿದ್ದಾರೆ.

ಆದರೆ ಬೆಂಕಿಗೆ ಬೈಕ್ಗಳು ಸುಟ್ಟುಕರಕಲಾಗಿವೆ. ನಾಗರಾಜ್, ರೇಣುಕೇಶ್, ಯೋಗೀಶ್ ಮೊದಲಾದ ಮೂವರ ಬೈಕ್ಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ