ಪ್ರತಾಪ್ ಸಿಂಹ ಸಿಎಂ ಭೇಟಿ ಆಗಿದ್ದೇಕೆ ಗೊತ್ತಾ?

ಬುಧವಾರ, 26 ಸೆಪ್ಟಂಬರ್ 2018 (16:53 IST)
ರಾಜ್ಯ ರಾಜಕೀಯ ಹಾಗೂ ಪರಿಷತ್ ಮೆಗಾಫೈಟ್ ನಡೆಯುತ್ತಿರುವ ಈ ಸಂದರ್ಭದಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ್ ಅವರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದಾರೆ.

ಮಂಡ್ಯದಲ್ಲಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರನ್ನು ಪ್ರತಾಪ್ ಸಿಂಹ ಭೇಟಿಯಾದರು. ಭೇಟಿ ನಂತರ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದು, ಇತ್ತೀಚೆಗೆ ಪ್ರಧಾನಿ ಮೈಸೂರಿಗೆ ಭೇಟಿ ನೀಡಿದಾಗ ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆಗೆ  ಅನುಮತಿ ನೀಡಿದ್ದರು. ಆದರೆ ಇದಕ್ಕೆ ಕೆಲ ಮರಗಳನ್ನು ನಾಶ ಮಾಡಬೇಕೆಂಬ ಬಗ್ಗೆ ವರದಿ ಆಗಿತ್ತು. ಮರಗಳ ಸರ್ವೆ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಇದು 7000 ಕೋಟಿಯ  ಯೋಜನೆ. ಮರಗಳ ವಿಚಾರದಲ್ಲಿ ಎಕ್ಸ್ ಪ್ರೆಸ್ ಹೈವೆ ವಿಳಂಬ ಆಗ್ತಿದೆ. ಈ ಬಗ್ಗೆ ಸಿಎಂ ಜೊತೆ ಮಾತುಕತೆ ಮಾಡಿದ್ದೇನೆ ಎಂದರು.

ಸಚಿವ ರೇವಣ್ಣ ಅವರಿಗೂ ಮಾಹಿತಿ ನೀಡಿದ್ದೇನೆ ಎಂದ ಪ್ರತಾಪ್ ಸಿಂಹ, ಮುಖ್ಯಮಂತ್ರಿ ಗಳು ನಮ್ಮ ಸಮಸ್ಯೆ ಗೆ ಸ್ಪಂದಿಸಿದ್ದಾರೆ. ಶೀಘ್ರ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೈವೆ ಕಾಮಗಾರಿ ಆರಂಭ ಆಗಲಿದೆ ಎಂದರು.

ಸಿಎಂ ಜೊತೆ ರಾಜಕೀಯದ ಬಗ್ಗೆ ಮಾತನಾಡಿದ್ರಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಸಂದರ್ಭದಲ್ಲಷ್ಟೇ ನಾನು ರಾಜಕಾರಣ ಮಾತನಾಡೋದು. ಬೇರೆ ಸಂದರ್ಭದಲ್ಲಿ ರಾಜಕೀಯ ಅಗತ್ಯ ಇಲ್ಲ ಎಂದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ