ಕಾಲೇಜಿನಲ್ಲಿ ಕಾಂಟ್ರಾಕ್ಟ್ ಕೆಲಸ ಮಾಡುತ್ತಿದ್ದ ವ್ಯಕ್ತಿ ವಿದ್ಯಾರ್ಥಿನಿಯರಿಗೆ ಮಾಡುತ್ತಿದ್ದದ್ದೇನು ಗೊತ್ತೇ?

ಬುಧವಾರ, 8 ಜನವರಿ 2020 (06:07 IST)
ಮಂಗಳೂರು : ಕಾಲೇಜಿನಲ್ಲಿ  ಕಾಂಟ್ರಾಕ್ಟ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ವಿದ್ಯಾರ್ಥಿನಿಯರಿಗೆ ಚುಡಾಯಿಸಿ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಹಿನ್ನಲೆಯಲ್ಲಿ ಆತನನ್ನು ವಿದ್ಯಾರ್ಥಿನಿಯರೇ ಹಿಡಿದು ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.


ಬಂಟ್ವಾಳದ ಎಸ್.ವಿ.ಎಸ್. ಕಾಲೇಜಿನಲ್ಲಿ ಕಾಂಟ್ರಾಕ್ಟ್ ಕೆಲಸ ಮಾಡುತ್ತಿದ್ದ ರೋಹಿತ್  ಎಂಬಾತ ಮ್ಯಾನೇಜ್ ಮೆಂಟ್ ಕಡೆಯವನೆಂದು ಕ್ಲಾಸ್ ಗೆ ಬಂದು ವಿದ್ಯಾರ್ಥಿನಿಯರ ಕೈ ಹಿಡಿದು ಎಳೆಯುತ್ತಿದ್ದನಂತೆ. ಈ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿದ್ದರೂ ಯಾವ ಪ್ರಯೋಜನವಾಗದ ಹಿನ್ನಲೆಯಲ್ಲಿ ವಿದ್ಯಾರ್ಥಿನಿಯರೇ ಆತನನ್ನು ಹಿಡಿದು ಬಿಸಿಮುಟ್ಟಿಸಿದ್ದಾರೆ.


ಅಷ್ಟೇ ಅಲ್ಲದೇ ಆತನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿ ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ