ವಿದ್ಯಾರ್ಥಿನಿಗೆ ನೀತಿ ಪಾಠ ಹೇಳಬೇಕಾದ ಶಿಕ್ಷಕ ಮಾಡಿದ್ದೇನು ಗೊತ್ತಾ?
ಭಾನುವಾರ, 10 ಫೆಬ್ರವರಿ 2019 (10:09 IST)
ಕೊಪ್ಪಳ : ವಿದ್ಯಾರ್ಥಿಗೆ ನೀತಿ ಪಾಠ ಹೇಳಬೇಕಾದ ಶಿಕ್ಷಕನೊಬ್ಬ ವಿದ್ಯಾರ್ಥಿನಿಯೊಬ್ಬಳಿಗೆಲವ್ ಮಾಡುವಂತೆ ಪೀಡಿಸಿದ ಘಟನೆ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಯಾರು ಇಲ್ಲದ ವೇಳೆ ವಿದ್ಯಾರ್ಥಿನಿಯನ್ನು ಸ್ಟಾಫ್ ರೂಮಿಗೆ ಕರೆದ ಶಿಕ್ಷಕ ತನ್ನನ್ನು ಲವ್ ಮಾಡು, ಪಪ್ಪಿ ಕೊಡು ಎಂದು ಪೀಡಿಸಿದ್ದಾನೆ. ಶಿಕ್ಷಕ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿನಿ ಶಾಲೆಗೆ ಹೋಗುವುದನ್ನು ಬಿಟ್ಟಿದ್ದಾಳೆ.
ಪೋಷಕರು ಈ ಬಗ್ಗೆ ವಿಚಾರಿಸಿದಾಗ ವಿದ್ಯಾರ್ಥಿನಿ ಶಿಕ್ಷಕನ ವರ್ತನೆಯ ಬಗ್ಗೆ ಹೇಳಿದ್ದಾಳೆ. ಪೋಷಕರು ಹಾಗೂ ಗ್ರಾಮಸ್ಥರು ಶಾಲೆಗೆ ಆಗಮಿಸಿ ಶಿಕ್ಷಕನನ್ನು ಪ್ರಶ್ನಿಸಿದ್ದಕ್ಕೆ ಶಿಕ್ಷಕ ತನ್ನ ಆರೋಪವನ್ನು ಅಲ್ಲಗಳೆದು ಕಣ್ಣೀರಿಟ್ಟಿದ್ದಾನೆ. ಮಾಹಿತಿ ತಿಳಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.