ವೈದ್ಯರ ಮುಷ್ಕರ,,ರೋಗಿಗಳ ಪರದಾಟ..18ಕ್ಕೂ ಹೆಚ್ಚು ಸಾವು

ಗುರುವಾರ, 16 ನವೆಂಬರ್ 2017 (11:11 IST)
ಖಾಸಗಿ ವೈದ್ಯರ ಮುಷ್ಕರ ಮುಂದುವರಿದಿದ್ದು ರೋಗಿಗಳ ಪರದಾಟ ತಾರಕ್ಕಕೇರಿದೆ. ಈಗಾಗಲೇ ರೋಗಿಗಳ ಸಾವಿನ ಸಂಖ್ಯೆ 18ಕ್ಕೂ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
 
ಖಾಸಗಿ ವೈದ್ಯರ ಮತ್ತು ಸರಕಾರದ ಮೊಂಡಾಟದಿಂದಾಗಿ ರೋಗಿಗಳು ದಯನೀಯ ಸ್ಥಿತಿ ಎದುರಿಸುವಂತಾಗಿದೆ. ರಾಜ್ಯ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಕೆಪಿಎಂಇ ಕಾಯ್ದೆ ವಿರೋಧಿಸಿ ಖಾಸಗಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
 
ಸಿಎಂ ಸಿದ್ದರಾಮಯ್ಯ ಖಾಸಗಿ ವೈದ್ಯರಿಗೆ ಮುಷ್ಕರ ನಿಲ್ಲಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಯಾವುದೇ ಕಾರಣಕ್ಕೂ ಮಸೂದೆ ಒಪ್ಪುವ ಮಾತೇ ಇಲ್ಲ ಎಂದು ಖಾಸಗಿ ವೈದ್ಯರ ಸಂಘ ಹಟಕ್ಕೆ ಬಿದ್ದಿದೆ ಎನ್ನಲಾಗಿದೆ.
 
ಖಾಸಗಿ ವೈದ್ಯರ ಮಷ್ಕರ ನಾಲ್ಕನೇ ದಿನಕ್ಕೆ ಕಾಲಿರಿಸಿದ್ದು ಜೆಡಿಎಸ್ ಮತ್ತು ಬಿಜೆಪಿ ವೈದ್ಯರನ್ನು ಬೆಂಬಲಿಸುತ್ತಿವೆ. ಮಸೂದೆ ಜನಸಾಮಾನ್ಯರ ಪರವಾಗಿದ್ದರಿಂದ ಸದನದಲ್ಲಿ ಮಂಡಿಸಿಯೇ ಸಿದ್ದ ಎಂದು ಆರೋಗ್ಯ ಖಾತೆ ಸಚಿವ ಕೆ.ಆರ್.ರಮೇಶ್ ಕುಮಾರ್  ಘೋಷಿಸಿದ್ದಾರೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ