ಸಂಸದ ಖರ್ಗೆಗೆ ಸೋಲಿನ ಭೀತಿ ಇಲ್ವಂತೆ!
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆಗೆ ಸೋಲಿನ ಭೀತಿ ಎದುರಾಗಿದೆ ಎಂಬಂತೆ ಹರಿದಾಡುತ್ತಿರುವ ಮಾತುಗಳಿಗೆ ಸಚಿವರೊಬ್ಬರು ತಿರುಗೇಟು ನೀಡಿದ್ದಾರೆ.
ಯಾದಗಿರಿಯಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಹಾಗೂ ಸಚಿವ ಪ್ರಿಯಾಂಕ ಖರ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಕ್ಷೇತ್ರದಲ್ಲಿ ಸಂಸದರಿಗೆ ಅಪಾರ ಸಂಖ್ಯೆಯ ಬೆಂಬಲಿಗರು ಇದ್ದಾರೆ. ಅವರಿಗ್ಯಾಕೆ ಸೋಲಿನ ಭೀತಿ ಎಂದು ಮರು ಪ್ರಶ್ನಿಸಿದ್ದಾರೆ. ಯಾರನ್ನೂ ಕೇಳಿ ಕ್ಷೇತ್ರಕ್ಕೆ, ಗುರುಮಠಕಲ್ ಗೆ ಬರಬೇಕಿಲ್ಲ. ಅವರ ತವರು ಕ್ಷೇತ್ರ ಅದಾಗಿದೆ. ಅವರಿಂದ ಬಿಜೆಪಿಯವರಿಗೆ ಸೋಲಿನ ಭೀತಿ ಇದೆ ಎಂದು ತಿರುಗೇಟು ನೀಡಿದ್ದಾರೆ.
ಸೋಲಿನ ಭೀತಿಯಲ್ಲಿರುವ ಜನರು ಈ ರೀತಿ ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ ಎಂದರು.