ಪ್ರತಾಪ್​​​​​​​​ಸಿಂಹಗೆ ಕಾಮನ್ ಸೆನ್ಸ್ ಇಲ್ವಾ..?

ಮಂಗಳವಾರ, 15 ನವೆಂಬರ್ 2022 (18:09 IST)
ಗುಂಬಜ್ ಮಾದರಿ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ರೆ ಜೆಸಿಬಿ ಯಂತ್ರದ ಮೂಲಕ ಒಡೆದು ಹಾಕ್ತೀನಿ ಎಂಬ ಪ್ರತಾಪ ಸಿಂಹ ಹೇಳಿಕೆಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ‘ಗುಂಬಾಜ್ ಮಾದರಿಯಲ್ಲಿರುವ ಎಲ್ಲವನ್ನೂ ಒಡೆದು ಹಾಕ್ತಾರಾ? ಅದನ್ನ ಒಡೆದು ಹಾಕಲು ಇವರು ಯಾರು?’ ಅಂತಾ ಮೈಸೂರಿನಲ್ಲಿ ಪ್ರತಾಪ್​​​ ಸಿಂಹ ವಿರುದ್ಧ ಕಿಡಿಕಾರಿದ್ದಾರೆ. ‘ಜವಾಬ್ದಾರಿಯಾಗಿರುವ ಎಂಪಿ ಸರಿಯಾಗಿ ಮಾತನಾಡಬೇಕು? ಗುಂಬಜ್ ಮಾದರಿ ಮಾಡಿರುವುದು ಎಂಜಿನಿಯರ್​​​​, ಅದನ್ನ ಮಾಡುವಾಗ ಸಂಸದರು ಏನ್ ಮಾಡ್ತಾ ಇದ್ರು? ಗುಂಬಾಜ್ ಮಾದರಿಯಲ್ಲಿರುವ ಎಲ್ಲವನ್ನೂ ಒಡೆದು ಹಾಕ್ತಾರಾ..? ಪ್ರತಾಪಸಿಂಹನಿಗೆ ಕಾಮನ್ ಸೆನ್ಸ್ ಇಲ್ವಾ?’ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ