ಸ್ಕ್ರೀನ್‌ ಶಾಟ್‌ ತೋರಿಸಿ ಗ್ರಾಹಕರಿಗೆ ದೋಖಾ

geetha

ಬುಧವಾರ, 14 ಫೆಬ್ರವರಿ 2024 (20:00 IST)
ಬೆಂಗಳೂರು : ರಾತ್ರಿ ವೇಳೆಯೇ ಫೀಲ್ಡಿಗೆ ಇಳಿಯುತ್ತಿದ್ದ ಆರೋಪಿ ಅರ್ಧರಾತ್ರಿಯಲ್ಲಿ ವಿಮಾನ ನಿಲ್ದಾಣದಿಂದ ಮನೆಗೆ ಹೋಗುವವರನ್ನೇ ಗುರಿಯಾಗಿರಿಸಿಕೊಳ್ಳುತ್ತಿದ್ದ ಬಳಿಕ ಗ್ರಾಹಕರನ್ನು ಕ್ಯಾಬ್‌ ಗೆ ಹತ್ತಿಸಿಕೊಂಡ ಬಳಿಕ ಅವರಿಗೆ ತಿಳಿಯದಂತೆ ಬುಕಿಂಗ್‌ ಕ್ಯಾನ್ಸಲ್‌ ಮಾಡುತ್ತಿದ್ದ. ಅವರ ಮನೆ ಹತ್ತಿರ ಬಂದಾಗ 5194 ರೂ. ಮೊತ್ತದ ಸ್ಕ್ರೀನ್‌ ಶಾಟ್‌ ತೋರಿಸಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದ. ಕಂಗಾಲಾದ ಗ್ರಾಹಕರೊಡನೆ ಜಗಳವಾಡಿ ಹಣ ವಸೂಲಿ ಮಾಡುತ್ತಿದ್ದ. ತಗಾದೆ ಮಾಡಿದವರಿಗೆ ಕಸ್ಟಮರ್‌ ಕೇರ್‌ ಗೆ ಫೋನ್ ಮಾಡುವಂತೆ ಹೇಳುತ್ತಿದ್ದ. ಆದರೆ ಓಲಾ ಕಸ್ಟಮರ್‌ ಕೇರ್‌ ರಾತ್ರಿ ಕಾರ್ಯ ನಿರ್ವಹಿಸುವುದಿಲ್ಲ ಎಂಬ ಗುಟ್ಟನ್ನು ಹೇಳುತ್ತಿರಲಿಲ್ಲ. 

ಮಧ್ಯರಾತ್ರಿಯಲ್ಲಿ ವಿಮಾನ ನಿಲ್ದಾಣದಿಂದ ಮನೆಗೆ ಹೋಗಲು ಓಲಾ ಕ್ಯಾಬ್‌ ಸೇವೆಯನ್ನು ಬಳಸುತ್ತಿದ್ದ ಗ್ರಾಹಕರಿಗೆ 5194 ರೂ. ಮೊತ್ತದ ಸ್ಕ್ರೀನ್‌ ಶಾಟ್‌ ತೋರಿಸಿ ಸುಲಿಗೆ ಮಾಡುತ್ತಿದ್ದ ಓಲಾ ಚಾಲಕನನ್ನು ಪೊಲೀಸರು ಬಂಧಿಸದ್ದಾರೆ. ಭರತ್‌ ಎಂಬಾತ ಬಂಧಿತ ಆರೋಪಿಯಾಗಿದ್ದು, ಈತ ಒಂದೇ ಸ್ಕ್ರೀನ್‌ ಶಾಟ್‌ ತೋರಿಸಿ ಹತ್ತಾರು ಜನರಿಗೆ ವಂಚಿಸಿರುವ ಆರೋಪ ಹೊಂದಿದ್ದಾನೆ.

ಈತನ ವಿರುದ್ದ ಹಲವು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಏರ್‌ಪೋರ್ಟ್‌ ಠಾಣೆಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಈತನ ಕುಕೃತ್ಯ ಹೊರಬಿದ್ದಿದೆ. ಭರತ್‌ ವಿರುದ್ದ ವಂಚನೆ, ಸುಲಿಗೆ ಆರೋಪದಡಿ ಪ್ರಕರಣ ದಾಖಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ