ನಿಮ್ಮ ವೈಫಲ್ಯಗಳ ಬಗ್ಗೆ ಮಾತನಾಡಬಾರದೇ?

ಬುಧವಾರ, 2 ಆಗಸ್ಟ್ 2023 (19:53 IST)
ಪ್ರಧಾನಿಯನ್ನು ಪ್ರಶ್ನಿಸುವ ಧೈರ್ಯ, ತಮಾಷೆ ಖರ್ಗೆ ಅವರಿಗಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್​​ ಮಾಡಿದೆ. ನಿಮ್ಮ ಉಸ್ತುವಾರಿ ಜಿಲ್ಲೆಯಾದ ಕಲಬುರಗಿಯಲ್ಲಿ 4 ಮಹಿಳೆಯರ ಅತ್ಯಾಚಾರ, 1 ಪೊಲೀಸ್ ಅಧಿಕಾರಿ ಸಾವು, ಮರಳು ಮಾಫಿಯಾದಿಂದ 500ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹಕ್ಕೆ ನಲುಗಿವೆ. 3 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, 100ಕ್ಕೂ ಹೆ್ಚ್ಚು ಜನರು ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಲ್ಲದೆ, ಹಿಂದೂಗಳು ಮತ್ತು ಹಿಂದೂ ಕಾರ್ಯಕರ್ತರ ಗುಂಪುಗಳು ನಿಮ್ಮ ದ್ವೇಷ ಮತ್ತು ಹಿಂದೂ ವಿರೋಧಿ ರಾಜಕೀಯದ ಭಾರವನ್ನು ಹೊತ್ತಿವೆ. ಪ್ರಾಮಾಣಿಕವಾದ ಪೊಲೀಸರಿಗೆ ಮತ್ತು ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿರುವುದು ಉತ್ತುಂಗದಲ್ಲಿದೆ. ಟ್ರೋಲ್ ಸಚಿವ ಪ್ರಿಯಾಂಕಾ ಖರ್ಗೆಯವರೇ ಇದು ನಿಮ್ಮ 2 ತಿಂಗಳ ರಿಪೋರ್ಟ್ ಕಾರ್ಡ್. ಆದರೂ, ಕಲಬುರಗಿಯಲ್ಲಿ ನಿಮ್ಮ ಸ್ವಂತ ವೈಫಲ್ಯಗಳ ಬಗ್ಗೆ ಏಕೆ ಮಾತನಾಡಬಾರದು? ಎಂದು ಬಿಜೆಪಿ, ಸಚಿವ ಪ್ರಿಯಾಂಕ್ ಖರ್ಗೆಗೆ ಟ್ವೀಟ್ ಮಾಡಿ ಕಿಚಾಯಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ