ಒನ್ ವೇ ಸಂಚಾರ ನಿಯಮ ಉಲ್ಲಂಘಿಸಿದ್ರೆ ದಂಡದ ಜತೆ ಡ್ರೈವಿಂಗ್ ಲೈಸೆನ್ಸ್ ರದ್ದು
ಬುಧವಾರ, 19 ಫೆಬ್ರವರಿ 2020 (11:08 IST)
ಬೆಂಗಳೂರು : ಒನ್ ವೇ ಸಂಚಾರ ನಿಯಮ ಉಲ್ಲಂಘಿಸಿದ್ರೆ ಭಾರಿ ಶಿಕ್ಷೆ ವಿಧಿಸುವಂತೆ ಸಾರಿಗೆ ಇಲಾಖೆ ಟ್ರಾಫಿಕ್ ಪೊಲೀಸರಿಗೆ ಶಿಪಾರಸು ಮಾಡಿದೆ.
ಡ್ರಿಂಕ್ ಆ್ಯಂಡ್ ಡ್ರೈವ್ ಮಾದರಿಯಲ್ಲಿ ಕ್ರಮಕ್ಕೆ ಶಿಫಾರಸು ಮಾಡಿದ್ದು, ದಂಡದ ಜತೆ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡುವಂತೆ ಸಾರಿಗೆ ಇಲಾಖೆ ಟ್ರಾಫಿಕ್ ಪೊಲೀಸರಿಗೆ ಶಿಫಾರಸು ಮಾಡಿದೆ.
ಒನ್ ವೇ ಉಲ್ಲಂಘಿಸಿ ವಾಹನ ಸಂಚಾರ ಮಾಡಿದರೆ 500 ರೂ ದಂಡ ಹಾಕಲಾಗಿತ್ತು. ಆದರೂ ಇಂತಹ ಪ್ರಕರಣಗಳು ಕಡಿಮೆಯಾಗದ ಹಿನ್ನಲೆ ದಂಡದ ಜತೆ ಡ್ರೈವಿಂಗ್ ಲೈಸೆನ್ಸ್ ರದ್ದತಿಗೆ ಶಿಪಾರಸು ಮಾಡಲಾಗಿದೆ ಎನ್ನಲಾಗಿದೆ.