ಡ್ರಿಂಕ್ ಅಂಡ್ ಡ್ರೈವ್ ಪರೀಕ್ಷೆ ವೇಳೆ ಪಿಎಸ್`ಐಗೆ ಕಪಾಳಮೋಕ್ಷ ಮಾಡಿದ ಯುವಕರು
ಡ್ರಿಂಕ್ ಅಂಡ್ ಡ್ರೈವ್ ಪರೀಕ್ಷೆ ವೇಳೆ ಕಂಠಪೂರ್ತಿ ಕುಡಿದಿದ್ದ ಯುವಕರು ಪಿಎಸ್`ಐಗೆ ಕಪಾಳಮೋಕ್ಷ ನಡೆಸಿರುವ ಘಟನೆ ಓಲ್ಡ್ ಏರ್`ಪೋರ್ಟ್ ರಸ್ತೆಯ ಮಹದೇವಪುರದ ಟೋಟಲ್ ಮಾಲ್ ಬಳಿ ನಡೆದಿದೆ.
ಕುಡಿದು ಎರ್ರಾಬಿರ್ರಿ ಬೈಕ್ ಓಡಿಸಿಕೊಂಡು ಬರುತ್ತಿದ್ದಾಗ ಅವರನ್ನ ತಡೆದ ಪಿಎಸ್`ಐ ವಿಚಾರಣೆಗೆ ಮುಂದಾದಾಗ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕರ್ತವ್ಯ ನಿರತ ಪೊಲೀಸರ ಮೇಲೇ ಕುಡುಕರ ಪುಂಡಾಟ ಹೆಚ್ಚುತ್ತಿದ್ದು, ಇಂತಹವರ ವಿರುದ್ಧ ಕಾನೂನಿನಡಿ ಸೂಕ್ತ ಕ್ರಮ ಜರುಗಿಸಬೇಕಿದೆ.