ಬಿಬಿಎಂಪಿಯ ನಾಗರಿಕ ಸೇವೆಗಳ ಸರಳೀಕರಣ, ಇ-ಆಡಳಿತದ ಉಪಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಹತ್ತಿರ ಒಂದು ಮೊಬೈಲ್ ಪೋನ್ ಇತ್ತು. ಆ ಪೋನ್‌ನ್ನು ಮೂರು ತಿಂಗಳು ಮಾತ್ರ ಬಳಸಿದ್ದೆ. ರಾತ್ರಿಯೂ ಸಹ ಹತ್ತಾರು ಕರೆಗಳು ಬರುತ್ತಿತ್ತು. ಇಂತಹ ರಗಳೆಯೇ ಬೇಡ ಎಂದು ಮೊಬೈಲ್ ಪೋನ್ ಇಟ್ಟುಕೊಳ್ಳುವುದನ್ನೆ ಬಿಟ್ಟು ಬಿಟ್ಟೆ. ಆದರೆ, ಈಗ ಎಲ್ಲರೂ ಡಿಜಿಟಲ್ ಇಂಡಿಯಾ ಬಗ್ಗೆ ಹೇಳುತ್ತಿದ್ದಾರೆ. ನನ್ನ ಬಳಿ ಮೊಬೈಲ್ ಪೋನ್ ಇಲ್ಲ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಅವರಿಗೆ ಟಾಂಗ್ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಇದಕ್ಕೂ ಮುಂಚೆ ಮಾತನಾಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್, ದೇಶದಲ್ಲಿ 20 ವರ್ಷಗಳ ಅಂತರದಲ್ಲಿ ಮೂರು ಕ್ರಾಂತಿಗಳು ನಡೆದಿವೆ. ಅದರಲ್ಲಿ ಮೊಬೈಲ್ ಕ್ರಾಂತಿಯೂ ಒಂದು. ದೇಶದಲ್ಲಿ ಪ್ರಸ್ತುತ 120 ಕೋಟಿ ಮೊಬೈಲ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದರು.