ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ ಕೇಂದ್ರ ಸಚಿವ ಸದಾನಂದ ಗೌಡ

ಸೋಮವಾರ, 24 ಜೂನ್ 2019 (11:03 IST)
ಬೆಂಗಳೂರು: ಕೇಂದ್ರ ಸಚಿವ ಸದಾನಂದ ಗೌಡ ವಿವಾದಗಳಿಂದ ದೂರವೇ ಉಳಿಯುವ ನಾಯಕ. ಆದರೆ ಅವರು ನೀಡಿದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದ್ದು, ಇದೀಗ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ.


ನನ್ನ ಹೆಸರಿನ ಮುಂದೆ ಗೌಡ ಎಂದಿರುವುದಕ್ಕೇ ನಾನು ಸಚಿವನಾದೆ ಎಂದು ಡಿವಿಎಸ್ ನೀಡಿದ ಹೇಳಿಕೆಗೆ ಬಿಜೆಪಿ ಮತ್ತು ಅದರ ಬೆಂಬಲಿಗರೇ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೇ ಸದಾನಂದ ಗೌಡರು ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದ್ದಾರೆ.

ನಾನು ಕುಗ್ರಾಮದಿಂದ ಬಂದು ಇಂದು ಈ ಮಟ್ಟಕ್ಕೆ ಬೆಳೆಯಲು ಕಾರಣ ಬಿಜೆಪಿ. ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ಪಕ್ಷ ನನಗೆ ತಾಯಿ ಸಮಾನ. ನನ್ನ ಒಕ್ಕಲಿಗ ಸಮುದಾಯಕ್ಕೆ ನನ್ನ ಪಕ್ಷ ತಕ್ಕ ಪ್ರಾತಿನಿಧ್ಯ ನೀಡಿದೆ ಎಂದು ಹೆಮ್ಮೆಯಿಂದ ಈ ರೀತಿ ಹೇಳಿದ್ದೇನಷ್ಟೇ. ಜನರು ನನ್ನನ್ನು ಆಯ್ಕೆ ಆಡಲು ಪಕ್ಷ ಮತ್ತು ಮೋದಿಯವರ ನಾಯಕತ್ವವೇ ಕಾರಣ ಎಂದು ಸ್ಪಷ್ಟನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ