ಮಾಧ್ಯಮದವರನ್ನ ಕಂಡು ಕಾರು ಹತ್ತಿ ಹೋದ ಇ.ಕೃಷ್ಣಪ್ಪ
ರಾಮನಗರದ ಬಾಲಕರ ಸರ್ಕಾರಿ ಪದವಿ ಕಾಲೇಜು ಬಳಿಯಿರುವ ಮತಗಟ್ಟೆಗೆ ಆಗಮಿಸಿದ ಜೆಡಿಎಸ್ ಮಾಜಿ ಎಂ ಎಲ್ ಸಿ ಇ. ಕೃಷ್ಣಪ್ಪ ಮಾಧ್ಯಮದವರನ್ನ ಕಂಡು ಕಾರು ಹತ್ತಿ ಹೋದ ಘಟನೆ ನಡೆದಿದೆ.
ರಾಮನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆ ಸಂಖ್ಯೆ 58 ಕ್ಕೆ ಭೇಟಿ ಕೊಡಲು ಇ.ಕೃಷ್ಣಪ್ಪ ಬಂದಿದ್ದರು. ನೀತಿ ಸಂಹಿತೆ ಉಲ್ಲಂಘನೆಯನ್ನು ಜೆಡಿಎಸ್ ಮುಖಂಡರು ಮಾಡಿದರು.
ಸುಮ್ಮನೆ ದಾರಿಯಲ್ಲಿ ಹೋಗುತ್ತಿದ್ದೆ. ಹಾಗೇ ಬಂದೇ ಎಂದ ಕೃಷ್ಣಪ್ಪ ವಿವರಣೆ ನೀಡಿ ಕ್ಯಾಮೆರಾ ಕಂಡ ಕೂಡಲೇ ಕಾರು ಹತ್ತಿ ಬಂದ ದಾರಿಗೆ ಮರಳಿದ ಘಟನೆ ನಡೆದಿದೆ.